ಕನ್ನಡ ಕಿರುತೆರೆ ನಟಿ ಸಿರಿ ಎಲ್ಲರಿಗೂ ಚಿರಪರಿಚಿತರು. ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ದೀರ್ಘ ಧಾರಾವಾಹಿ ’ಬದುಕು” ವಿನ ನಾಯಕಿಯಾಗಿ ಮನೆಮಾತಾಗಿದ್ದ ಅವರು ಅನಂತರ ’ರಂಗೋಲಿ’ ಧಾರಾವಾಹಿಯ ಮೂಲಕವೂ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಲ್ಲದೆ ಈ ಹಿಂದೆ ನಡೆದ ಬಿಗ್ ಬಾಸ್ ೧೦ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
ಬರೋಬ್ಬರಿ ೩೦ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿಗೀಗ ೩೯ರ ಹರೆಯ. ಧಾರಾವಾಹಿಯ ಮೂಲಕ, ಬಿಗ್ ಬಾಸ್ ಮೂಲಕ, ವಿವಿಧ ಕಾರ್ಯಕ್ರಮಗಳ ಮೂಲಕ ಅವರು ಸಂಪಾದಿಸಿಕೊಂಡಿರುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೆ ನಟಿ ಸಿರಿ ಕಳೆದ ತಿಂಗಳಲ್ಲಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಪ್ರಭಾಕರ ಬೋರೇಗೌಡ ಎಂಬವರ ಜೊತೆ ಜೂನ್ ೧೩ರಂದು ಚಿಕ್ಕಬಳ್ಳಾಪುರದ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದರು. ಕೆಲವು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ನಟಿ ನಂತರ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಗಳೊಂದಿಗೆ ತಮ್ಮ ಮದುವೆಯ ಖುಷಿಯನ್ನು ಹಂಚಿಕೊಂ ಡಿದ್ದರು.
ಈಗ ನಟಿ ಅವರ ಇನ್ನೊಂದು ಪೋಸ್ಟ್ ನಿಂದಾಗಿ ಸುದ್ದಿಯಲ್ಲಿದ್ದಾರೆ. ಸಿರಿಯವರ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಈ ಹಿಂದಿನ ಫೋಟೋಗಳಿಗೂ ಈ ಫೋಟೋದಲ್ಲಿ ಕಾಣಿಸುತ್ತಿರುವ ರೀತಿಗೂ ತುಂಬಾ ವ್ಯತ್ಯಾಸವಿರುವುದರಿಂದ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಫೋಟೋ ನೋಡಿದ ಅಭಿಮಾನಿಗಳು ಬ್ಯೂಟಿ ಕ್ವೀನ್, ಎಷ್ಟು ಕ್ಯೂಟ್ ಆಗಿ ಕಾಣುತ್ತಿದ್ದೀರಿ ಅಂತೆ ಕಾಮೆಂಟ್ಸ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಹೋದಾಗಲೂ ಸಿರಿ ಮದುವೆ ವಿಚಾರವಾಗಿ ದೊಡ್ಡ ಚರ್ಚೆಯಾಗಿತ್ತು.
ಇದೂವರೆಗೂ ನಟಿ ಸಿರಿ ಯಾಕೆ ಮದುವೆ ಆಗಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ, ಬಿಗ್ಬಾಸ್ನಿಂದ ಹೊರ ಬಂದು ಕೆಲವು ದಿನಗ ಳಾಗುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ನಟಿಸಿದ ಬದುಕು ಧಾರಾವಾಹಿಯ ದಿನಗಳಿಂದಲೂ ಪ್ರಭಾಕರ ಬೋರೇಗೌಡ ಪರಿಚಯವಿದ್ದು, ಸ್ನೇಹಿತರಾಗಿದ್ದೆವು.
ಮಧ್ಯದಲ್ಲಿ ಕೆಲವು ದಿನಗಳು ಸಂಪರ್ಕದಲ್ಲಿ ಇರಲಿಲ್ಲ. ಆದರೆ, ಪರಸ್ಪರ ಭೇಟಿಯಾದ ಬಳಿಕ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದೆವು ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ವಯಸ್ಸು ಕಳೆದಂತೆ ಕಳೆ ಹೆಚ್ಚಿದವರಂತೆ ಕಾಣುವ ಸಿರಿ ಕನ್ನಡ ಪ್ರೇಕ್ಷಕರ ಮನದಲ್ಲಿ ಈಗಲೂ ಹಾಗೆಯೇ ಇದ್ದಾರೆ.