ಬೆಂಗಳೂರು: ಸಮುದ್ರದ ಬಂದರುಗಳು ದೇಶಗಳ ನಡುವಿನ ಸರಕುಗಳ ವ್ಯಾಪಾರಕ್ಕೆ ಕರ್ನಾಟಕ ರಾಜ್ಯವು ಒಳ್ಳೆಯ ಸ್ಥಳವಾಗಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ತಿಳಿಸಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಪ್ರಸ್ಟಿಜ್ ಮುಖ್ಯ ಕಚೇರಿಯಲ್ಲಿ ನಡೆದ ಮುಂಬರುವ ಸಂಚಿಕೆಯಲ್ಲಿ ಭರತ್ನೋಮಿಕ್ಸ್ ನಲ್ಲಿ ಭಾರತೀಯ ಭೂದೃಶ್ಯವನ್ನು ಹಾದುಹೋಗುವ ಸಾಗರಗಳಿಂದ ಪರ್ವತಗಳವರೆಗೆ ಎಂಬ ಅಂಶದಡಿಯಲ್ಲಿ ನೀಲಿ ಆರ್ಥಿಕತೆ: ಸಾಗರಮಾಲಾ ಯೋಜನೆಯ ಕುರಿತು ಮಾತನಾಡಿದರು.
ರಾಜ್ಯದಲ್ಲಿ ಶರಾವತಿ, ಕಾಳಿ ನದಿಗಳು ಸೇರಿದಂತೆ ಅನೇಕ ನದಿಗಳಿಂದ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರ ಅತ್ಯಗತ್ಯ ಎಂದರು.
ಮುಂಬರುವ ದಿನಗಳಲ್ಲಿ ಮಂಗಳೂರು ಪ್ರವಾಸಿಗರ ತಾಣವಾಗಲಿದೆ. ಸರ್ಕಾರ ಗ್ರೀನ್ ಸಿಗ್ನಲ್ ನಂತೆ ಇದೀಗ ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸಿದ್ದತೆ ನಡೆಯುತ್ತಿದ್ದು, ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಇವತ್ತಿನ ದಿನಮಾನಗಳಲ್ಲಿ ಸಾರಿಗೆ ರಸ್ತೆ ಹಾಗೂ ರೈಲ್ವೆ ರಸ್ತೆ ಅಭಿವೃದ್ಧಿಯಂತೆ ಸಮುದ್ರದಲ್ಲಿ ಸಹ ಜಲಸಾರಿಗೆ ಅಭಿವೃದ್ಧಿ ಕಾಣುತ್ತಿದೆ ಎಂದು ತಿಳಿಸಿದರು.
ಭಾರತದ ಮಹತ್ವಾಕಾಂಕ್ಷೆಯ ಕರಾವಳಿಯ ಆಕಾಂಕ್ಷೆಗಳ ಮೂಲಕ ಸಾಗಲಿದ್ದು, ದೇಶದ ಜಲಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪರಿವರ್ತಕ ಉಪಕ್ರಮವಾದ ಸಾಗರಮಾಲಾ ಯೋಜನೆಯ ಮಹತ್ವ ಬಗ್ಗೆ ಸಹ ತಿಳಿಸಿದರು.ಇನ್ನುಮುಂದೆ ಜಲಸಾರಿಗೆಯಿಂದ ದೇಶ ಆರ್ಥಿಕತೆ ಅಭಿವೃದ್ಧಿ ಕಂಡುಕೊಳ್ಳಲಿದೆ ಎಂದು ಎಂದರು.
ಬಳಿಕ ಡಾ. ಆನಂದ್ ರಾಂಗನಾಥನ್ ಅವರು ಏರುತ್ತಿರುವ ಭಾರತ್ – ಅವಕಾಶಗಳು ಮತ್ತು ಮರಣದಂಡನೆ ಬಗ್ಗೆ ಸುರ್ಧಿಘವಾಗಿ ಮಾತನಾಡಿದರು.
ಭಾರತದೊಳಗಿನ ವಿಸ್ತೃತ ಅವಕಾಶಗಳು ಇವೆ. ಆದರೆ ಅವುಗಳನ್ನು ಸದುಪಯೋಗ ಪಡೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಅವಕಾಶಗಳು ಹಿಂದೆ ಬೀಳುತ್ತಿವೆ ಎಂದು ಬೇಸರ ನುಡಿಗಳು ಮಾತನಾಡಿದರು.
ಪ್ರಧಾನ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇದನ್ನು ಯುವಕ – ಯುವತಿಯರು ಸದುಪಯೋಗ ಪಡೆದುಕೊಂಡು ಸಾಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.ಇನ್ನು ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸೇರಿದಂತೆ ಅನೇಕರು ಭಾಗವಹಿಸಿದರು.