ದೇವನಹಳ್ಳಿ : ಬೆಂಗಳೂರು ಗ್ರಾಮಾಂತರದಲ್ಲಿ ಅತಿ ಹೆಚ್ಚಿನ ಗುಣಮಟ್ಟದ ಕಾಮಗಾರಿಯಲ್ಲಿ ಹೆಗ್ಗಳಿಕೆ ಸಾಧಿಸಿದ ಪಂಚಾಯಿತಿಗಳಲ್ಲಿ ಗಂಗವಾರ ಚೌಡಪ್ನಲ್ಲಿ ಪಂಚಾಯಿತಿ ಕೂಡ ಒಂದು ಎಂದು ಗಂಗವಾರ ಚೌಡಪ್ಪನಳ್ಳಿಯ ಪಂಚಾಯಿತಿ ಅಧ್ಯಕ್ಷ ಕಮಲೇಶ್ ಅವರು ಅಭಿಪ್ರಾಯಸಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬ ಳಿಯ ಗಂಗವಾರ ಚೌಡಪ್ಪನಹಳ್ಳಿಯ ಮೊದಲನೇಹಂತದ ಗ್ರಾಮ ಸಭೆ ಹಾಗೂ ವಿಷೇಶಚೇತನರ ಸಮನ್ವಯ ಗ್ರಾಮಸಭೆ ಯನ್ನು
ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬಹುದಾದ ಗ್ರಾಮ ಸಭೆಯಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹೊಸತ
ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ವಿವರಗಳ ಪಟ್ಟಿ ತಯಾರಿಸಿ, ಅಭಿವೃದ್ಧಿ ಹೊಂದುವಪ್ರಸ್ತುತ ಪೂರ್ಣಗೊಂಡಿರುವ ಕಾರ್ಯಕ್ರಮಗಳನ್ನು ಗ್ರಾಮಸ್ಥರ ಮುಂದೆ ಚರ್ಚಿಸಿ ನಂತರ ಅನುಮೋದನೆ ಪಡೆದು ಹೆಚ್ಚುವರಿ ಅನುದಾನಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಅನುಷ್ಠಾನಕ್ಕೆ ತರುವ ಮುಖ್ಯ ಉದ್ದೇಶದಿಂದ ಗ್ರಾಮ ಸಭೆಯ ನಡೆಸಲಾಗುತ್ತಿದೆ.
ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಆಗಬೇಕಿರುವ ಕಾಮಗಾರಿ ಗಳು ವೈಯಕ್ತಿಕ ಕಾಮಗಾರಿಗಳ ಬಗ್ಗೆ ಕುಲಂಕುಶವಾಗಿ ಗಮನಕ್ಕೆ ಬಂದಿದ್ದು ನಿಗದಿತ ಅವಧಿಯೊಳಗೆ ತಮ್ಮ ಸವಾಲು ಗಳನ್ನು ಪರಿಹರಿಸುತ್ತೇವೆ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ದೂರ ಸರಿಸಿದರೆ ಮಾತ್ರ ಪಂಚಾಯಿತಿ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಗಂಗವಾರ ಚೌಡಪ್ಪನಹಳ್ಳಿ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಉಮೇಶ್ ಮಾತನಾಡಿ, ಬೇಸಿಗೆ ಪ್ರಾರಂಭ ವಾಗು ತ್ತಿದೆ ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸಬೇಕು. ಸಮಸ್ಯೆಗಳನ್ನು ಹೊತ್ತು ಬರುವ ಗ್ರಾಮ ಸ್ಥರು ಬಡವರು ಮಧ್ಯಮ ವರ್ಗದವರು ಅವರ ನೆರವಿಕೆ ದಾವಿಸಿ, ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿ ಕೊಡುವಂತೆ ಪಂಚಾಯಿತಿ ಸಿಬ್ಬಂದಿ ವರ್ಗಕ್ಕೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಗೂ ವಿಶೇಷ ಚೇತನರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿ ಎಸ್ ಎಸ್ ಏನ್ ಮಾಜಿ ಅಧ್ಯಕ್ಷ ಶಂಕ್ರಪ್ಪ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡಬೈರೇಗೌಡ ಗಂಗವಾರ ಚೌಡಪ್ಪನ ಹಳ್ಳಿ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ
ಉಮೇಶ್ ಸದಸ್ಯರಾದ ಚೈತ್ರ ಮನೋಹರ್ ಎಂ ರಾಜಣ್ಣ ನಾರಾಯಣಸ್ವಾಮಿ ಅಶ್ವಥ್ ನಾರಾಯಣ್ ವನಿತಾ ವಸಂತ್ ಕುಮಾರ್ ಸ್ವಾಮಿ ಶಾಂತಮ್ಮ ಅಶ್ವತಪ್ಪ, ಪಂಚಾಯಿತಿ ನೋಡಲ್ ಅಧಿಕಾರಿ ರಾಜಶೇಖರ್ ರೈ ಪಿಡಿಒ ಶ್ರೀನಿವಾಸ್ ಕಾರ್ಯದರ್ಶಿ ಶ್ರೀಧರ್ ಪಂಚಾಯ್ತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.