ದೇವನಹಳ್ಳಿ: ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ಷಾ ಕೇವಲವಾದ ಮಾತುಗಳನ್ನಾಡಿರುವುದನ್ನು ನಮ್ಮ ಬಿ.ಎಸ್.ಪಿ. ಜಿಲ್ಲಾ ಸಮಿತಿಯಿಂದ ಖಂಡಿಸುತ್ತೇವೆ, ಮನುವಾದಿಗಳ ಮನಸ್ಥಿತಿಯನ್ನು ಕಠೋರವಾಗಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ರಾಜ್ಯ ಬಿ.ಎಸ್.ಪಿ. ಪ್ರ.ಕಾರ್ಯದರ್ಶಿ ಹೆಚ್. ನರಸಿಂಹಯ್ಯ ತಿಳಿಸಿದರು.
ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿ ಬಿ.ಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಅಂಬೇಡ್ಕರ್ರವರನ್ನು ಪದೇಪದೇ ಅವಮಾನಿಸುತ್ತಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ಷಾ ರವರು ತಮ್ಮ ಬಾಷಣದಲ್ಲಿ ದೇಶದ ಜನ ಡಾ|| ಬಿ.ಆರ್. ಅಂಬೇಡ್ಕರ್ ಎಂದು ದ್ಯಾನ ಮಾಡುವ ಬದಲು ದೇವಾಲಯಕ್ಕೆ ತೆರಳಿ ದ್ಯಾನ ಮಾಡಿ ಏಳು ಜನ್ಮಗಳ ಸ್ವರ್ಗ ಸಿಗಲಿದೆ ಎಂದು ಹೇಳಿರುವುದು ಅವರ ಮನಸ್ಥಿತಿಗೆ ಏನು ಹೇಳುವುದು, ಅಂಬೇಡ್ಕರ್ರವರ ಸಂವಿಧಾನದ ಅಡಿಯಲ್ಲಿ ಜನರಿಂದ ಮತ ಪಡೆದ ಜನಪ್ರತಿನಿದಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ವಿಕೃತ ಮನಸ್ಥಿತಿಯಿಂದ ಹೊರಬಂದು ತಮ್ಮ ಅನಿಸಿಕೆ ತಿಳಿಸಬೇಕು, ದೇಶದ ಜನತೆಯ ಕ್ಷಮೆಯಾಚಿಸಬೇಕು, ಇದನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಛೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ನೀಡಲಾಗುವುದು ಎಂದರು.
ಬಿ.ಎಸ್.ಪಿ.ಜಿಲ್ಲಾ ಸಮಿತಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ ಹಿಂದೆ ಬಿಜೆಪಿಯ ಅನಂತಕುಮಾರ್ ಹೆಗ್ಗಡೆಯವರು ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳಿದ್ದರು, ಸಿ.ಟಿ. ರವಿ ಕೂಡ ಸಂವಿಧಾನದ ಬಗ್ಗೆ ಮಾತನಾಡಿದ್ದರು ಕೇಂದ್ರ ಮಂತ್ರಿ ಅಂಬೇಡ್ಕರ್ ಬಗ್ಗೆ ಲಘುವಾಗಿ ಹೇಳಿರುವುದು ಖಂಡನೀಯ, ಸಂವಿಧಾನದಿಂದ ಅನೇಕ ಜನ ಮಂತ್ರಿಗಳಾಗಿ ರಾಜ್ಯಬಾರ ಮಾಡುತ್ತಿದ್ದಾರೆ,
ದೇಶದ ಬಗ್ಗೆ ಕಿಂಚಿತ್ ಗೌರವವಿದ್ದರೆ ರಾಜಕಾರಣಿಗಳು ಅಂಬೇಡ್ಕರ್ ಬಗ್ಗೆ ಗೌರವ ನೀಡುವ ಕೆಲಸ ಮಾಡಬೇಕು ಇಲ್ಲದಿದ್ದರೆ ಅವರ ವಿರುದ್ದ ಬಿ.ಎಸ್.ಪಿ ಖಂಡಿಸುತ್ತದೆ, ಇದರ ಬಗ್ಗೆ ನಾಲ್ಕು ತಾಲೂಕುಗಳ ಜಿಲ್ಲಾ ಬಿ.ಎಸ್.ಪಿ ಸಮಿತಿ ಜಿಲ್ಲಾಡಳಿತ ಭವನದ ಬಳಿ ಡಿ.20ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಈ ಸಮಯದಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಎನ್.ಬಿ. ಮಂಜುನಾಥ್, ಉಪಾಧ್ಯಕ್ಷ ಕಾರಹಳ್ಳಿ ಮುನಿರಾಜು, ನಂಜಪ್ಪ. ತಾಲೂಕು ಅಧ್ಯಕ್ಷ ರಾಮಾಂಜಿನಿ, ಪ್ರ.ಕಾರ್ಯದರ್ಶಿ, ಕೋರಮಂಗಲ ಮೂರ್ತಿ, ರಮೇಶ್, ಮಹಿಳಾ ಘಟಕದ ಜಯಲಕ್ಷ್ಮಿ, ಪಲ್ಲವಿ, ಸಂ. ಕಾರ್ಯದರ್ಶಿ ಮಲ್ಲೇಪುರ ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.