ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರದಲ್ಲಿಪ್ರಜಾವಿಮೋಚನಾ ಚಳವಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಹಾಗೂ ದೊಡ್ಡಬಳ್ಳಾಪುರ ತಾಲೂಕು ಘಟಕದ ವತಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೀಳಾಗಿ ನೀಡಿದ ಹೇಳಿಕೆ ಖಂಡಿಸಿ ಪತ್ರಿಕಾ ಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅದ್ಯಕ್ಷ ಹೆಚ್.ರಾಘವೇಂದ್ರ ಅವರು ಅಮಿತ್ ಷಾ ಅವರ ಹೇಳಿಕೆ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳು, ಒಬಿಸಿ ಇತರೆ ಹಿಂದುಳಿದ ವರ್ಗಗಳಿಗೆ ಘಾಸಿ ಉಂಟುಮಾಡಿದೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾರತದ ಚರಿತ್ರೆಯಲ್ಲಿ. ವ್ಯವಸ್ಥೆಯಿಂದ ತುಳಿತಕ್ಕೆ ಒಳಗಾದವರ, ನೊಂದವರ ಹಾಗೂ ಶೋಷಿತರ ಧ್ವನಿಯಾಗಿ ಸರ್ವರು ಸಮಾನರು ಎಂದು ಪ್ರತಿವಾದಿಸಿದ ಅಂಬೇಡ್ಕರ್ ಅವರು, ಇಡೀ ಪ್ರಪಂಚವೇ ಮೆಚ್ಚುವ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಶಯದ ಸಂವಿಧಾನ ರಚಿಸಿ ಕೊಟ್ಟವರು ಅಂತಹ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ ಅಮಿತ್ ಷಾ ವಿರುದ್ಧ ಸೂಕ್ತ ಕ್ರಮವ ಜರುಗಿಸಬೇಕು ಹಾಗೂ ಸಂಪುಟದಿಂದ ವಜಾಗೋಳಿಸಬೇಕು ಆಗ್ರಹಿಸಿದರು.
ನಂತರ ಮಾತನಾಡಿದ ತಾಲೂಕು ಅದ್ಯಕ್ಷ ಹೆಚ್. ಶಿವಕುಮಾರ್ ಅವರು ಅವರು ಶಿಕ್ಷಣ ಮತ್ತು ಶಾಲಾ ಕ್ಷೇತ್ರದಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದವರು. ಭಾರತದ ಅತ್ಯಂತ ಗೌರವಾನ್ವಿತ ಮಹಿಳಾ ಶಿಕ್ಷಕರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಶಿಕ್ಷಣದ ಮೂಲಕ ಮಹಿಳೆಯರು ಮತ್ತು ಅಸ್ಪೃಶ್ಯರ ಉನ್ನತಿಗಾಗಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟರು. ಜನವರಿ 3. ಅವರ 194 ನೇ ಜನ್ಮ ದಿನಾಚರಣೆ ಆಚರಿಸುವುದರ ಜೋತೆಗೆ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾಪುರಸ್ಕಾರ ಸಹ ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.