ಬೆಂಗಳೂರು: ಅತ್ಯಂತ ಹೆಸರುವಾಸಿಯಾದ ಸ್ಟೇಷನರಿ ಮತ್ತು ಬರವಣಿಗೆ ಉಪಕರಣಗಳ ಕಂಪನಿಗಳಲ್ಲಿ ಒಂದಾದ ಲಕ್ಸಾರ್ ರೈಟಿಂಗ್ ಇನ್ಸ್ಟ್ರುಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಮಕ್ಕಳ ಸೃಜನಶೀಲ ಅಭಿವ್ಯಕ್ತಿ ಮತ್ತು ಕಲಾ ಉತ್ಪನ್ನಗಳ ಅಮೆರಿಕದ ನಂ.1 ಬ್ರ್ಯಾಂಡ್ ಕ್ರಯೋಲಾ ಎಲ್ಎಲ್ಸಿ ಜೊತೆ ದೀರ್ಘಕಾಲಿಕ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಇಂದು ಘೋಷಿಸಿದೆ, ಇದು ಭಾರತಕ್ಕೆ ಐಕಾನಿಕ್ ಜಾಗತಿಕ ಬ್ರಾ÷್ಯಂಡ್ನ ಅಧಿಕೃತ ಪ್ರವೇಶವನ್ನು ಸೂಚಿಸುತ್ತದೆ.
ಮಕ್ಕಳು ವರ್ಧಿಸುತ್ತಿರುವ ಡಿಜಿಟಲ್ ಪರಿಸರದಲ್ಲಿ ಬೆಳೆಯುತ್ತಿರುವ ಈ ಸಮಯದಲ್ಲಿ, ಯುವ ಕಲಿಯುವವರಲ್ಲಿ ಕಲಿಕೆ, ಆತ್ಮವಿಶ್ವಾಸ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಬೆಂಬಲಿಸುವುದರ ಜೊತೆಗೆ, ಪ್ರಾಯೋಗಿಕ ಸೃಜನಶೀಲತೆ ಮತ್ತು ಕಲ್ಪನಾತ್ಮಕ ಆಟವನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಪಾಲುದಾರಿಕೆ ಹೊಂದಿದೆ.
ಆರು ದಶಕಗಳಿಗೂ ಹೆಚ್ಚು ಕಾಲ ಭಾರತದ ಕುರಿತಾದ ಬರವಣಿಗೆ, ಚಿತ್ರಣ ಮತ್ತು ಅಭಿಪ್ರಾಯಗಳನ್ನು ಆಧರಿಸಿದ ವಿಧಾನವನ್ನು ರೂಪಿಸುವ ಮೂಲಕ, ಲಕ್ಸರ್ ದೇಶಾದ್ಯಂತ ತರಗತಿ ಕೊಠಡಿಗಳು, ಮನೆಗಳು ಮತ್ತು ರೀಟೇಲ್ ಮಾರಾಟ ಮಳಿಗೆಗಳಲ್ಲಿ ಪ್ರಬಲ ನಂಬಿಕೆಯನ್ನು ಗಳಿಸಿದೆ. ಏತನ್ಮಧ್ಯೆ, 120 ವರ್ಷಗಳಿಗೂ ಹೆಚ್ಚು ಕಾಲ, ಕ್ರಯೋಲಾ ತನ್ನ ಸಾಂಪ್ರದಾಯಿಕ ಸೃಜನಶೀಲ ಪರಿಕರಗಳ ಮೂಲಕ ಪ್ರಪಂಚದಾದ್ಯAತದ ಅನೇಕ ಪೀಳಿಗೆಯ ಮಕ್ಕಳಿಗೆ ಸ್ಫೂರ್ತಿಯಾಗಿ ಸೃಜನಶೀಲತೆ ಮತ್ತು ಕಲ್ಪನೆಗೆ ಮತ್ತೊಂದು ಹೆಸರಾಗಿದೆ.
ಈ ಪಾಲುದಾರಿಕೆಯು ಎರಡು ಪಾರಂಪರಿಕ ಬ್ರಾ÷್ಯಂಡ್ಗಳನ್ನು ಮಹತ್ವದ ಅಮೆರಿಕ-ಭಾರತ ಸಹಯೋಗದಲ್ಲಿ ಒಟ್ಟುಗೂಡಿಸುತ್ತದೆ, ಕ್ರಯೋಲಾದ ಜಾಗತಿಕ ನಾಯಕತ್ವವನ್ನು ಲಕ್ಸರ್ನ ಆಳವಾದ ಮಾರುಕಟ್ಟೆ ವ್ಯಾಪ್ತಿಯೊಂದಿಗೆ ಸಂಯೋಜಿಸಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಕಿರಿಯ ಗ್ರಾಹಕ ಮಾರುಕಟ್ಟೆಗಳಲ್ಲಿ ಒಂದಾದ ವಿಶ್ವಾಸಾರ್ಹ ಸೃಜನಶೀಲ ಉತ್ಪನ್ನಗಳಿಗೆ ಪ್ರವೇಶವನ್ನು ವಿಸ್ತರಿಸುತ್ತದೆ.
ಕ್ರಯೋಲಾ ಪಾಲುದಾರಿಕೆ ಮತ್ತು ಭಾರತಕ್ಕೆ ಪ್ರವೇಶಿಸುವ ಬಗ್ಗೆ ಮಾತನಾಡಿದ ಕ್ರಯೋಲಾ ಎಲ್ಎಲ್ಸಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಅಧಿಕಾರಿ ಪೀಟ್ ರುಗ್ಗಿರೊ, ಭಾರತವು ಇಂದು ವಿಶ್ವದ ಅತ್ಯಂತ ಕ್ರಿಯಾತ್ಮಕ ಮತ್ತು ಸ್ಪೂರ್ತಿದಾಯಕ ಸೃಜನಶೀಲ ಮಾರುಕಟ್ಟೆಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಯುವ ಜನಸಂಖ್ಯೆ, ಸದೃಢ ಶೈಕ್ಷಣಿಕ ಪರಿಸರ ವ್ಯವಸ್ಥೆ ಮತ್ತು ಕಲೆ ಮತ್ತು ಅಭಿವ್ಯಕ್ತಿಗೆ ಆಳವಾದ ಸಾಂಸ್ಕೃತಿಕ ಮೆಚ್ಚುಗೆಯೊಂದಿಗೆ, ಇದು ಕ್ರಯೋಲಾದ ಜಾಗತಿಕ ಪಯಣದಲ್ಲಿ ನೈಸರ್ಗಿಕ ಮುಂದಿನ ಹೆಜ್ಜೆಯಾಗಿದೆ. ಲಕ್ಸರ್ನಲ್ಲಿ, ಭಾರತೀಯ ಗ್ರಾಹಕರ ಬಗ್ಗೆ ಅಪ್ರತಿಮ ತಿಳುವಳಿಕೆ ಹೊಂದಿರುವ ಮತ್ತು ದಶಕಗಳಿಂದ ದೇಶದಲ್ಲಿ ಅಂತರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಯಶಸ್ವಿಯಾಗಿ ಕಟ್ಟಿ ನಂಬಿಕೆ ಗಳಿಸಿರುವ ದಕ್ಷ ಪಾಲುದಾರರು ನಮಗೆ ದೊರೆತಿದ್ದಾರೆ. ಈ ಪಾಲುದಾರಿಕೆಯು ನಮಗೆ ಭಾರತದ ಮಾರುಕಟ್ಟೆಯನ್ನು ಅರ್ಥಪೂರ್ಣವಾಗಿ, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಮತ್ತು ದೀರ್ಘಕಾಲದ ಪ್ರಭಾವ ಬೀರುವ ರೀತಿಯಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಪಾಲುದಾರಿಕೆಯ ಕುರಿತು ಮಾತನಾಡಿದ ಲಕ್ಸರ್ ರೈಟಿಂಗ್ ಇನ್ಸ್ಟ್ರುಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಪೂಜಾ ಜೈನ್ ಗುಪ್ತಾ, ಈ ಮಾರುಕಟ್ಟೆಯಲ್ಲಿ ಸೃಜನಶೀಲತೆ ಮತ್ತು ಕಲರಿಂಗ್ ವಿಭಾಗವನ್ನು ಬಲಪಡಿಸುವ ದೀರ್ಘಕಾಲಿಕ ದೃಷ್ಟಿಕೋನದಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಭಾರತ ಹೇಗೆ ಬರೆಯುತ್ತದೆ ಮತ್ತು ಭಾರತದ ಅಭಿವ್ಯಕ್ತಿ ಪ್ರದರ್ಶನವನ್ನು ರೂಪಿಸಿರುವ ಕಂಪನಿಯಾಗಿ, ಲಕ್ಸರ್ ದೈನಂದಿನ ಕಲಿಕೆಯಲ್ಲಿ ಸೃಜನಶೀಲತೆಯನ್ನು ಹೆಚ್ಚು ಆಳವಾಗಿ ಸಂಯೋಜಿಸುವ ಅಗತ್ಯವನ್ನು ಮನಗಂಡಿದೆ. ಶಿಕ್ಷಣವು ಬದಲಾಗುತ್ತಿರುವಂತೆ, ಸೃಜನಶೀಲತೆಯು ಕೇವಲ ಒಂದು ಗೌಣ ವಿಷಯವಾಗಿ ಉಳಿಯದೆ, ಮಕ್ಕಳ ಬೆಳವಣಿಗೆ ಮತ್ತು ವಿಕಸನದ ಮುಖ್ಯವಾಹಿನಿಯಾಗಬೇಕು. ಕ್ರಯೋಲಾದ ಜಾಗತಿಕ ನಾಯಕತ್ವ ಮತ್ತು ಲಕ್ಸರ್ನ ಪ್ರಮಾಣ ಮತ್ತು ವ್ಯಾಪ್ತಿಯೊಂದಿಗೆ, ನಮ್ಮ ಮಹತ್ವಾಕಾಂಕ್ಷೆಯು ಕೇವಲ ಬ್ರಾ÷್ಯಂಡ್ ಅನ್ನು ಪರಿಚಯಿಸುವುದಲ್ಲ, ಬದಲಿಗೆ ಭಾರತೀಯ ಮನೆಗಳು ಮತ್ತು ತರಗತಿ ಕೊಠಡಿಗಳಲ್ಲಿ ಜಾಗತಿಕವಾಗಿ ವಿಶ್ವಾಸಾರ್ಹ ಸೃಜನಶೀಲತೆಯ ಸಾಧನ ಗಳಿಗೆ ಪ್ರವೇಶವನ್ನು ವಿಸ್ತರಿಸುವುದಾಗಿದೆ ಎಂದು ಹೇಳಿದರು.
ಕ್ರಯೋಲಾ ಮತ್ತು ಲಕ್ಸರ್ ತಮ್ಮ ಉತ್ಪನ್ನಗಳಲ್ಲಿ ಸುರಕ್ಷತೆ ಮತ್ತು ಗುಣಮಟ್ಟದ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬದ್ಧವಾಗಿವೆ. ಈ ಸಹಯೋಗವು ಸೃಜನಶೀಲತೆಯನ್ನು ಬೆಳೆಸುವ ಮತ್ತು ಮಕ್ಕಳು ತಮ್ಮನ್ನು ತಾವು ಕಲಾತ್ಮಕವಾಗಿ ವ್ಯಕ್ತಪಡಿಸಿಕೊಳ್ಳಲು ಅಗತ್ಯವಿರುವ ಸಾಧನಗಳನ್ನು ಒದಗಿಸುವಲ್ಲಿ ಎರಡೂ ಕಂಪನಿಗಳ ಸಮರ್ಪಣೆಯನ್ನು ಒತ್ತಿಹೇಳುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ www.luxor.in ಮತ್ತು www.crayola.com.
ಅಮೆರಿಕದ ನಂ. 1 ಕ್ರಿಯೇಟಿವ್ ಬ್ರ್ಯಾಂಡ್ ಕ್ರಯೋಲಾ ಭಾರತಕ್ಕೆ ಪರಿಚಯಿಸಿದ ಲಕ್ಸರ್



