ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಆಗಸ್ಟ್ 6ರವರೆಗೆ ನಡೆಯಲಿರುವ ಬೃಹತ್ ಗಾರ್ಮೆಟ್ಸ್ ಮತ್ತು ಸೀರೆ ಮೇಳಕ್ಕೆ ಚಾಲನೆ ದೊರೆತಿದೆ.ಬಟ್ಟೆ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಜೇಶ್ ಮತ್ತು ಅರುಣ್ ನೇತೃತ್ವದಲ್ಲಿ ಈ ಮೇಳ ನಡೆಯುತ್ತಿದ್ದು, ಈ ಮೇಳಕ್ಕೆ ಮೈಸೂರು ಮಹಾರಾಜ ವಂಶದ ಇಂದ್ರಾಕ್ಷಿ ರಾಣಿ ಬಟ್ಟೆ ಕೊಳ್ಳುವ ಮೂಲಕ ಚಾಲನೆ ನೀಡಿದರು.
ಈ ಮೇಳದಲ್ಲಿ ನೂರಾರು ಬಗೆಯ ಪುರುಷ,ಮಹಿಳೆಯರು ಧರಿಸುವ ಫ್ಯಾಶನ್ ಯುಕ್ತ ಬಟ್ಟೆಗಳು, ಕೋಟುಗಳು, ಜರ್ಕಿನ್, ಟೀ ಶರ್ಟ್,ಪ್ಯಾಂಟ್,ಶರ್ಟ್, ಮಹಿಳೆಯರ ವಿವಿಧ ಖುರ್ತಾಗಳು ಎಲ್ಲರ ಗಮನ ಸೆಳೆಯುತ್ತಿವೆ, ಶೇ 60ರಷ್ಟು ರಿಯಾಯಿತಿ ದರದಲ್ಲಿ ಪೂಮಾ,ಅಡಿಡಾಸ್ ಕಂಪನಿಯ ಶೂಗಳು ದೊರೆಯಲಿವೆ,
ಮಹಿಳೆಯರಿಗಾಗಿ ಕಡಿಮೆ ದರದಲ್ಲಿ ಕಾಂಚಿವರಂ, ಬನಾರಸ್ ಸೇರಿದಂತೆ ದೇಶಿಯ ಸೀರೆಗಳು ಎಲ್ಲರ ಗಮನ ಸಳೆಯುತ್ತಿವೆ.
ಆಯೋಜಕರಾದ ಯಶವಂತ್ ಕುಮಾರ್ ಮಾತನಾಡಿ,ಇದೊಂದು ಬೃಹತ್ ಮೇಳವಾಗಿದ್ದು ಆಗಸ್ಟ್ ಆರರವರೆಗೆ ನಡೆಯಲಿದೆ, ರಿಯಾಯಿತಿ ದರವಲ್ಲದೇ ಒಂದು ಕೊಂಡರೆ ಮತ್ತೇರಡು ಕನಿಷ್ಟ ಬೆಲೆಗೆ ಕೊಳ್ಳಬಹುದು ಎಂಬ ಆಫರ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.