ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದು ಮತ್ತು ನಾಳೆ (ಜ.14 ಮತ್ತು 15) ಎರಡು ದಿನ ಶ್ರೀ ಗುರು ಸಿದ್ದರಾಮೇಶ್ವರರ 852ನೇ ಜಯಂತಿ ಮಹೋತ್ಸವ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇತರೆ ಸಚಿವರುಗಳು, ಗಣ್ಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 10 ಸಾವಿರದಿಂದ ರಿಂದ 15 ಸಾವಿರ ಜನರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸಲಿವೆ.
ಇದರಿಂದ ಟ್ರಾಫಿಕ್ ಜಾಮ್ ಉಂಟಾಗದಂತೆ ತಡೆಯಲು, ಸಗುಮ ಸಂಚಾರಕ್ಕಾಗಿ ಅರಮನೆ ಮೈದಾನ ಸೇರಿದಂತೆ ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ.
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಲರ್ ಮ್ಯಾನರ್ ಜಂಕ್ಷನ್-ಬಿ.ಡಿ.ಎ ಆಪ್ ಲ್ಯಾಂಪ್-ರಮಣಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ಬಸ್ ನಿಲ್ದಾಣ-ಕಾವೇರಿ ಜಂಕ್ಷನ್ ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ನಲ್ಲಿ ಬಲ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-02 ತ್ರಿಪುರವಾಸಿನಿ ಆರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ಪಾಸ್ನಲ್ಲಿ ಬಂದು- ಗೇಟ್ ನಂ-02 ತ್ರಿಮರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಆರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ-ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಮರದಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಮೇಕ್ರಿ ಸರ್ಕಲ್ ಎಡತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ- ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ, ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆ ಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಕಂಟೋನ್ಮೆಂಟ್ ಹೋಗಬಹುದಾಗಿರುತ್ತದೆ. (ದಂಡು) ರೈಲ್ವೆ ಸ್ಟೇಷನ್ ಕಡೆಗೆ ಹೋಗಬಹುದು.
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಸರ್ ಮ್ಯಾನರ್ ಜಂಕ್ಷನ್-ಬಿ.ಡಿ.ಎ ಅಪ್ ಲ್ಯಾಂಪ್-ರಮಣ ಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ನಿಲ್ದಾಣ-ಕಾವೇರಿ ಜಂಕ್ಷನ್ ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಲ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ಪಾಸ್ನಲ್ಲಿ ಬಂದು- ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ-ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.
ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಮೇಕ್ರಿ ಸರ್ಕಲ್ ಎಡತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ- ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
ಹಿಂತಿರುಗಿ ವಾಪಾಸ್ಸು ಹೋಗುವಾಗ ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆ ಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಹೋಗಬಹುದಾಗಿದೆ.