ಯಲಹಂಕ: ಯಲಹಂಕದ ನಾಗಾರ್ಜುನ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ನಾಗಾರ್ಜುನ ಪದವಿ ಕಾಲೇಜಿನ ಆವರಣದಲ್ಲಿ ಭಾನುವಾರ ಗಣರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.
ಧ್ವಜಾರೋಹಣದ ನಂತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ನಂಜುಂಡಪ್ಪ ರವರು ಮಾತನಾಡುತ್ತಾ ಎಷ್ಟೇ ಕೆಲಸವಿದ್ದರೂ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬದಲ್ಲಿ ತಪ್ಪದೇ ಭಾಗವಹಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ ಯಾಕೆಂದರೆ ಸಂವಿಧಾನ ನಮಗೆ ಜೀವಿಸುವ ಹಕ್ಕನ್ನು ನೀಡಿ ನಮ್ಮ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಿದೆ ಎಂದು ಹಿತವಚನ ನೀಡಿದರು. ಡಾ ಶ್ರೀಲತಾ. ಎ. ರವರು ಸಂವಿಧಾನದ ಪ್ರಸ್ತಾವನೆಯ ಕುರಿತು ಮಾತನಾಡಿದರು.
ಪ್ರೊಫೆಸರ್ ಮಧುರ. ಡಿ. ಮತ್ತು ಪ್ರೊ ಫೆಸರ್ ಅನಂತ್ ರವರಿಂದ ಗೀತ ಗಾಯನ ನಡೆಯಿತು. ಸಮಾರಂಭದ ಅಧ್ಯಕ್ಷರಾದ ನಾಗಾರ್ಜುನ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವ್ಯವಹಾರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಹರೀಶ್ ಬಾಬು ಎಸ್ ರವರು ಸಂವಿಧಾನದ ಕುರಿತು ಮಾತನಾಡಿದರು ಗಾಯನ ಕಾರ್ಯಕ್ರಮವಿತ್ತು. ಕ್ರೀಡಾ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ರಾಜಣ್ಣ, ಎಲ್ಲಾ ವಿಭಾಗದ ಮುಖ್ಯಸ್ಥರು ವೇದಿಕೆಯನ್ನ ಅಲಂಕರಿಸಿದ್ದರು. ಪ್ರೊಫೆಸರ್ ಜಯಂತಿಯವರು ಕಾರ್ಯಕ್ರಮ ನಿರೂಪಿಸಿದರು. ವಿನುತಾರವರು ವೇದಿಕೆಯಲ್ಲಿರುವವರೆಲ್ಲರನ್ನು ಸ್ವಾಗತಿಸಿದರು.