ಗೌರಿಬಿದನೂರು: ತಾಲ್ಲೂಕಿನ ತೊಂಡೇಭಾವಿ ಹೋಬಳಿಯ ಅಲಕಾಪುರ ಗ್ರಾಮದಲ್ಲಿರುವ ಇತಿಹಾಸ ಪರಂಪರೆ ಉಳ್ಳ ಶ್ರೀ ಜಡೆ ಚೆನ್ನಸೋಮೇಶ್ವರ ದೇವಾಲಯ ಆವರಣದಲ್ಲಿ ನಾಗರಹಾವು ಹೆಡೆ ಬಿಚ್ಚಿ ನಿಂತಿರುವ ದೃಶ್ಯ ಭಕ್ತಾದಿಗಳ ದರ್ಶನ ನೀಡಿದ ಘಟನೆ ನಡೆಯಿತ್ತು.
ಅಲಕಾಪುರ ದೇವಾಲಯ ಶ್ರೀ ಜಡೆ ಚೆನ್ನಸೋಮಶ್ವರ ಸುಮಾರು 650 ವರ್ಷಗಳ ಇತಿಹಾಸ ಪರಂಪರೆ ಉಳ್ಳ ದೇವಾಲಯ ಇದಾಗಿದೆ,ಈ ದೇವರಿಗೆ ಸಾವಿರಾರು ಭಕ್ತಾದಿಗಳ ವೃಂದವೇ ಇದೆ,ಇದು ಮದಕರಿ ನಾಯಕರಿಂದ ನಿರ್ಮಾಣಗೊಂಡ ದೇವಾಲಯ ಅಗಿನಿಂದ ಇಲ್ಲಿ ಅನೇಕ ವರ್ಷಗಳಿಂದ ಪೂಜೆ ಕೈಂಕರ್ಯಗಳ ನಡೆದುಕೊಂಡು ಬಂದಾ ಇತಿಹಾಸ ಈ ದೇವಾಲಯಕ್ಕೆ ಪ್ರತಿವರ್ಷ ಬ್ರಹ್ಮ ರಥೋತ್ಸವ ಸಹ ನಡೆಯುತ್ತದೆ,ಇದು ಈಗ ಮುಜಾರಾಯಿ ಇಲಾಖೆ ಸೇರಿದ ದೇವಾಲಯ ಸಹ ಅಗಿದೆ,ಇಂದು ಮುಂಜಾನೆ ನಾಗರ ಪ್ರತ್ಯಕ್ಷ ಅಗಿ ಸುಮಾರು ಎರಡು ಗಂಟೆಗಳ ಕಾಲ ಹೆಡೆ ಬಿಚ್ಚಿ ಭಕ್ತಾದಿಗಳಿಗೆ ದರ್ಶನ ನೀಡಿದೆ.