ಬೆಂಗಳೂರು: ಶಿವಪ್ರಿಯ ಸ್ಕೂಲ್ ಆಪ್ ಡ್ಯಾನ್ಸ್ ವತಿಯಿಂದ ಅಪರೂಪದ ಅವಳಿ ಜೋಡಿಗಳಾದ ಸಹೋದರಿದ್ವಿಯರ ಅನನ್ಯ, ಅಮೂಲ್ ಜಿ.ಗಂಗಾಧರ್ ಗೌಡ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ತೆಲುಗು ವಿಜ್ಞಾನ ಸಮಿತಿಯ ಕೃಷ್ಣ ದೇವರಾಯ ಸಭಾಂಗಣದಲ್ಲಿ ನಡೆಯಿತು.
ಅವಳಿ ಸಹೋದರಿಯರಾದ ಅನನ್ಯ ಮತ್ತು ಅಮೂಲ್ಯ ಖ್ಯಾತ ಭರತ ನಾಟ್ಯ ಕಲಾವಿದ, ಚಿತ್ರ ನಟ ಡಾ.ಸಂಜಯ್ ಶಾಂತರಾಮ್ ಅವರ ವಿವಿಧ ರಾಗ, ತಾಳಗಳಿಗೆ ಹಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.ಅವಳಿ ಸಹೋದರಿಯರ ವಿವಿಧ ರಾಗ, ತಾಳ, ಪೌರಣಿಕ ದೃಶ್ಯಗಳಿಗೆ ತಕ್ಕಂತೆ ತಮ್ಮ ಹೆಜ್ಜೆ ಹಾಕಿ ನೋಡುಗ ಪ್ರೇಕ್ಷಕರ ಮನಸೂರೆಗೊಂಡರು.
ಹಳೆಯ ಚಿತ್ರಗಳ ಖ್ಯಾತ ನಟಿ ಜಯಲಕ್ಷ್ಮೀ , ಅವಳಿ ಸಹೋದರಿಯರು ನೃತ್ಯ ಸಂದರ್ಭದಲ್ಲಿ ತಲೀನರಾಗಿ ಅದ್ಬುತ ಭರತ ನಾಟ್ಯ ಪ್ರದರ್ಶನ ನಮ್ಮನ್ನು ಮನಸೂರೆಗೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಲಾ ಯೋಗಿ ಪ್ರತಿಷ್ಠಾನದ ಅಧ್ಯಕ್ಷ ನಂಜುಂಡರಾವ್ ಮಾತನಾಡಿ,ಸಂಜಯ್ ಶಾಂತರಾಮ್ ಭರತ ನಾಟ್ಯ ಕಲಾ ಕ್ಷೇತ್ರದ ಅದ್ಬುತ ಪ್ರತಿಭೆಯಾಗಿದ್ದು ಅವರ ನೃತ್ಯ ಕಲಿಕೆ ನಡೆಸಿದವರು ಉತ್ತಮ ಕಲಾವಿದೆಯರಾಗಿ ಹೊರಹೊಮ್ಮಬಹುದು ಎಂದರು.