ದೇವನಹಳ್ಳಿ: ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಅಶ್ವತ್ ಪ್ರತಿಷ್ಠೆ ಹಾಗೂ ನಾಗದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ ನಡೆಯಿತು.ಭಾರತೀಯ ಸಂಸ್ಕೃತಿಯಲ್ಲಿ ಗಿಡ-ಮರ- ದೇವತೆಗಳನ್ನು ಪೂಜಿಸುತ್ತ ಬಂದಿದ್ದು ಅಂತಹದೊಂದು ಪವಿತ್ರ ಸ್ಥಳವಿದ್ದರೆ ಅದು ಅಶ್ವತ್ ಕಟ್ಟೆಯಾಗಿದೆ ಎಂದು ಆಹಾರ ಪೂರೈಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್.ಮುನಿಯಪ್ಪ ಅಭಿಪ್ರಾಯಿಸಿದರು.
ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಅಶ್ವತ್ ಪ್ರತಿಷ್ಠೆ ಹಾಗೂ ನಾಗದೇವತೆಗಳ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಅಶ್ವತ್ ಕಟ್ಟೆಯಲ್ಲಿ ನಾನಾ ದೇವತೆಗಳ ಅಡಗಿವೆ ಎಂದು ನಮ್ಮ ಪೂರ್ವಜ್ಜರು ಸೇರಿದಂತೆ ದಂತಕಥೆಗಳ ಓದಿ ತಿಳಿದಿದ್ದೇವೆ. ಜತೆಗೆ ಸಾಕಷ್ಟು ಔಷದಿಗಳ ಗುಣಗಳನ್ನು ಹೊಂದಿವೆ. ಅಶ್ವತ್ಕಟ್ಟೆಯಲ್ಲಿ ದೈವ ರೂಪದ ಆವಾಸ ಸ್ಥಾನವೆಂದು ಭಾವಿಸಿದ್ದೇವೆ. ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ, ಜತೆಗೆ ಸಕಲ, ಆರೋಗ್ಯ, ಐಶರ್ಯ ದಯಪಾಲಿಸುವಂತೆ ಭಗವಂತನದಲ್ಲಿ ಪ್ರಾರ್ಥಿ ಸುತ್ತೇನೆ.
ಸುದ್ದಿಗಾರರ ಪ್ರಶ್ನೆಗಳಿತ್ತರಿಸಿದ ಅವರು ದೇವನಹಳ್ಳಿ ಪಟ್ಟದ ಪ್ರಮುಖ ರಸ್ತೆಗಳು ಗುದ್ದಲಿ ಪೂಜೆ ನೆರವೇರಿಸಿ ತಿಂಗಳ ಕಳೆದ ಕಾಮಗಾರಿ ಕೈಗೆತ್ತುಕೊಳ್ಳದ ಬಗ್ಗೆ ತಿಳಿಸಲಾಗಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ತಡವಾಗಿದೆ. 6 ಲೈನ್ ನೂ ಅಥವಾ 4 ಲೈನ್ ರಸ್ತೆಯೊ ಎಂಬ ಸಾರ್ವಜನಿಕರಲ್ಲಿ ಬೇಡ 4 ಲೈನ್ ರಸ್ತೆ ನಿರ್ಮಿಸುವ ಬಗ್ಗೆ ಕಾರ್ಯಾದೇಶ ನೀಡಲಾಗಿದೆ. ಸದಸ್ಯದಲ್ಲೇ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲು ಸಂಬಂಧ ಪಟ್ಟವರಿಗೆ ಸೂಚನೆ ನೀಡುತ್ತೇನೆ.
ಸದಸ್ಯದಲ್ಲೇ ತಾಲ್ಲೂಕು, ಜಿಲ್ಲಾ ಪಂಚಾಯಿತಿಚುನಾವಣೆ ದಿನಾಂಕ ಹೊರಬೀಳಲಿದೆ. ಕಾರ್ಯಕರ್ತರು ಪಕ್ಷದ ಬಲವರ್ದನೆ ಮುಂದಾಗಬೇಕು. ಪಕ್ಷದಲ್ಲಿ ಎಲ್ಲ ಕಾರ್ಯಕರ್ತರಿಗೂ ವಿವಿಧ ಇಲಾಖೆಗಳಲ್ಲಿನ ನಾಮಿನಿ ಸದಸ್ಯರನ್ನಾಗಿ ಮಾಡಲಾಗಿದೆ ಉಳಿದ ಇಲಾಖೆಗಳಲ್ಲಿ ಅಗತ್ಯನುಸಾರ ಗುರ್ತಿಸುವ ಸ್ಥಾನಮಾನ ನೀಡಲಾಗುತ್ತದೆ.ಷಷ್ಠಿ ದಿನಗಳಲ್ಲಿ ಆಯ್ಕೆ ಮಾಡಿಕೊಂಡು ಗಣಪತಿ ಹೋಮ, ಲಕ್ಷ್ಮಿಹೋಮ, ಅಥಿತ್ವ ಉಪನಯನ, ಸಮೂಹಿತ ವಿವಾಹ, ಪೂರ್ಣಹುತಿ, ಮಹಾ ಮಂಗಳರಾತಿ, ಸಂಜೆ ಗಣಮತಿ ಪೂಜೆ, ಪಂಚಗವ್ಯ, ಯಾಗಶಾಲಾ ಪ್ರವೇಶ, ಕುಶಂರಾಧನೆ, ಅಸ್ಥುಬಲಿ, ನಾಗಬಿಂಬಗಳಿಗೆ ಜಲಗಿವಾಶ, ಶಿರದಿವಾಶ, ಪುಷ್ಪದಿವಾಶ, ಶೈಯಾದಿವಾಶ, ಪರಿರ್ಯಜಾನಿ ಕರಣ, ಅಷ್ಟ ಬಂಧನ ಪ್ರತಿಷ್ಠಾಪನೆ, ವೇಧಶಪಾರಾಯಣ, ಕಲಸರಾಧನೆ, ಗಣಪತಿ, ನವಗ್ರಹ, ಕುಶಲದೇವತಾ, ಗ್ರಾಮದೇವತಾ ಹೋಮ,
ಪ್ರತಿಷ್ಠಾಂಘ ಹೋಮ, ಕಾಲಹೋಮ, ಸರ್ಪಶಾಂತಿ, ಮಹಾ ಪೂರ್ಣಹುತಿ, ಸುಲಜಾನದಲ್ಲಿ ಪ್ರಾಣಪ್ರತಿಷ್ಠಾಪನೆ, ಮಹಾಕುಂಭಾ ಬಿಷೇಖ, ಪಂಚಮೃತ ಅಭಿಷೇಕ, ಕುಷ್ಮಂಡವೇಧನಾ, ಕದಳಿವೃಕ್ಷ ಚೇಧನ,ಧರ್ಮಣದರ್ಶ, ಗೋ ಪ್ರವೇಶ, ಗೋಪೂಜೆ, ಉಪಚರ ಪೂಜೆ ಸಲ್ಲಿಸಲಾಗಿದ್ದು, ಪುರಾಣ ಪ್ರಸಿದ್ದಿ ಹೊಂದಿರುವ ಸೋಲೂರು ಗ್ರಾಮದ ಅಶ್ವತ್ ಕಟ್ಟೆ ಬಹಳ ವರ್ಷಗಳಿಂದ ಶಿಥಿಲವಸ್ಥೆ ಯಲ್ಲಿತ್ತು. ಗ್ರಾಮಸ್ಥರ ಸಹಕಾರ ಹಾಗೂ ಧಾನಿಗಳ ಸಹ ಯೋಗದೊಂದಿದೆ ಬಹಳ ಅತ್ಯದ್ಬು ತವಾಗಿ ಅಶ್ವತ್ ಕಟ್ಟೆ ಪ್ರಕಾರಗಳು ಮೂಡಿ ಬಂದಿದೆ. ಧಾರ್ಮಿಕ ವಿಧಿ ವಿಧಾನಗಳಂತೆ ಹೋಮಹವನ, ದೇವರಿಗೆ ಆಭಿಷೇಕ, ದೂರದೂರಿನಿಂದ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆಡಿಪಿ ಜಿಲ್ಲಾ ಸದಸ್ಯ ಕೊದಂಡರಾಮು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಂತರ ರಾಷ್ಟ್ರಿಯ ವಿಮಾನ ನಿಲ್ದಾಣ ಪ್ರಾದಿಕಾರದ ಅದ್ಯಕ್ಷ ದ್ಯಾವರಹಳ್ಳಿ ಶಾಂತ ಕುಮಾರ್, ಗ್ಯಾರಂಟಿ ಯೋಜನೆಗಳ ಪ್ರಾದಿಕಾರದ ಜಿಲ್ಲಾ ಅದ್ಯಕ್ಷ ಚನ್ನಹಳ್ಳಿ ರಾಜಣ್ಣ, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಕಲ್ಪನ, ಸದಸ್ಯರಾದ ಆಂಜಿನಮ್ಮ, ನರಸಿಂಹರಾಜು, ಡೈರಿ ಅದ್ಯಕ್ಷ ರಾಮಾಂಜಿ ನಪ್ಪ, ಸಿಇಒ ರಾಜಣ್ಣ, ಕಾಂಗ್ರೇಸ್ ಮುಖಂಡರಾದ ಎಸ್ಪಿ.ಮುನಿರಾಜು, ಉಮೇಶ್, ನಾಗೇಗೌಡ, ಬೈರೇಗೌಡ, ಸೋಮಶೇಖರ್, ಗ್ರಾಮಸ್ಥ ರಾದ ಅಣ್ಣೈಯಪ್ಪ, ತಾಚಪ್ಪ, ಮಾರುತಿ, ಸೋಲೂರು ನಾಗರಾಜು ಮತಿತ್ತರರು ಹಾಜರಿದ್ದರು.