ಬೆಂಗಳೂರು: ಲೋಕೋಪೈಲಟ್ ಸಮಯ ಪ್ರಜ್ಞೆಯಿಂದ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನೊಬ್ಬನ ಜೀವ ಉಳಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಯುವಕ ನೇರವಾಗಿ ಮೆಟ್ರೋ ಟ್ರ್ಯಾಕ್ಗೆ ಜಿಗಿದಿದ್ದಾನೆ. ಬೆಳಿಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹಸಿರು ಮಾರ್ಗದಲ್ಲಿ ಬರುವ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಇದರಿಂದಾಗಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಮೆಟ್ರೋ ರೈಲು ಬರುತ್ತಿರುವುದನ್ನು ದೂರದಿಂದ ಕಂಡ ಯುವಕ ಇನ್ನೇನು ಹತ್ತಿರ ಬರುವಷ್ಟರಲ್ಲಿ ಹಳಿಗೆ ಹಾರಿ ಎರಡು ಟ್ರ್ಯಾಕ್ ಗಳ ನಡುವೆ ಮಲಗಿದ್ದ.ರೈಲಿನ ಲೋಕೋಪೈಲಟ್ ಸಮಯ ಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ ಮೆಟ್ರೋ ಹಳಿಗೆ ಯುವಕ ಹಾರುತ್ತಿದ್ದಂತೆ ಮೆಟ್ರೋ ರೈಲನ್ನು ಲೋಕೋಪೈಲಟ್ ನಿಲ್ಲಿಸಿದ್ದಾರೆ.