ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಿಚ್ಮಂಡ್ ಸರ್ಕಲ್ ಮೇಲೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಸಂಚಾರಿ ಪೊಲೀಸರು ರಕ್ಷಿಸಿರುತ್ತಾರೆ.
ನಿನ್ನೆ ಸಂಜೆಯ ಆರುವರೆ ಸುಮಾರಿಗೆ ವೆಂಕಟರಾಜು (೩೭)ವ್ಯಕ್ತಿ ಮತ್ತು ಆತನ ಪತ್ನಿಯೂ ರಿಚ್ಮಂಡ್ ಸರ್ಕಲ್ ಪ್ಲೇಯರ್ ಮೇಲೆ ಗಲಾಟೆ ಮಾಡಿಕೊಂಡು ವೆಂಕಟರಾಜು ತನ್ನ ಮೊಬೈಲ್ ಅನ್ನು ಮೇಲ್ಚೇತುವಿನಿಂದ ಕೆಳಗಡೆ ಬಿಸಾಡಿ ಕೂಗಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಸಮಯದಲ್ಲಿ ಆತನ ಪತ್ನಿ ತನ್ನ ಗಂಡನನ್ನು ರಕ್ಷಿಸಿ ಎಂದು ಕಿರಿಚಿಕೊಂಡಿದ್ದನ್ನು
ಅಲ್ಲೇ ಸಂಚಾರಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸರು ಗಮನಿಸಿ ರಕ್ಷಿಸುತ್ತಿರುತ್ತಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ತಿಳಿಸಿರುತ್ತಾರೆ.
ಅಶೋಕನಗರ ಸಂಚಾರಿ ಸಬ್ ಇನ್ಸೆ÷್ಪಕ್ಟರ್ ಹರೀಶ್ ಕುಮಾರ್ ಮತ್ತು ಲೋಕೇಶ್ ಮುಖ್ಯಪೇದೆ ಎಂಬುವವರು ತಮ್ಮ ಮೋಟರ್ ಸೈಕಲ್ ನಲ್ಲಿ ಅಳವಡಿಸಿದ್ದ ಸೈರನ್ ಬಳಸಿಕೊಂಡು ವಿರುದ್ಧ ದಿಕ್ಕಿನಿಂದ ಬಂದು ರಕ್ಷಿಸಿರುತ್ತಾರೆ.
ತದನಂತರ ಇವರನ್ನು ಅಶೋಕನಗರ ಕಾನೂನು ಮತ್ತು ವ್ಯವಸ್ಥೆಗಳು ಠಾಣೆಗೆ ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಿರುತ್ತಾರೆ.