ನಂಜನಗೂಡು: ಮೈಕ್ರೋ ಫೈನಾನ್ಸ್ ಗಳ ಅಟ್ಟಹಾಸಕ್ಕೆ ಗ್ರಾಮೀಣ ಜೀವಗಳು ಬಲಿ ಆಗುತ್ತಿದೆ ಆತ್ಮಹತ್ಯೆ ಬೇಡ ಆತ್ಮಸ್ಥೈರ್ಯವಿರಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ಪ್ರೊ .ನಂಜುಂಡಸ್ವಾಮಿಯವರ 89ನೇ ಹುಟ್ಟು ಹಬ್ಬದ ಪ್ರಯುಕ್ತ ರೈತ ಜಾಗೃತಿ ಸಭೆಯ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಮೈಕ್ರೋ ಫೈನಾನ್ಸ್ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಅಧಿಕ ಬಡ್ಡಿ ಸಾಲ ವಸೂಲಿ ಹೆಸರಲ್ಲಿ ಕಿರುಕುಳ ನೀಡಿ ಬೇಸತ್ತು ಊರಿನ ಜನರು ಊರನ್ನೇ ತೊರೆದು ಬೇರೆಕಡೆ ಹೋಗುತ್ತಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಆತ್ಮಹತ್ಯೆ ಬೇಡ ಆತ್ಮಸ್ಥೈರ್ಯವಿರಲಿ ನಿಮ್ಮೊಂದಿಗೆ ಹಸಿರು ಸೇನೆ ಇದೆ ಎಂದು ಧೈರ್ಯ ತುಂಬಿದರು.
ನಂತರ ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ ರೈತರು ಸ್ವಯಂ ಪ್ರೇರಣೆಯಿಂದ ಪ್ರೊ . ನಂಜುಂಡಸ್ವಾಮಿಯವರ ಜಯಂತಿಯನ್ನು ರಾಜ್ಯದ್ಯಂತ ಆಚರಣೆ ಮಾಡುತ್ತಿದ್ದಾರೆ ರೈತರ ಸಾಲ ಮನ್ನಾ ವಿಚಾರವನ್ನು ಭಾರತದಲ್ಲಿ ಮೊದಲು ಧ್ವನಿ ಎತ್ತಿದವರು ಮತ್ತು ಗ್ರಾಮಗಳಲ್ಲಿ ಉಚಿತ ಪಂಪ್ ಸೆಟ್ ವಿದ್ಯುತ್ ಅವರ ಹೋರಾಟದ ಫಲ ಎಂದು ಹೇಳಿದರು.
ರ್ಯಕ್ರಮದಲ್ಲಿ ಪ್ರೊ ಕಾಳೇಗೌಡ ನಾಗರಾವ್,ಸತೀಶ್ ರಾವ್, ಹಿಮ್ಮಾವು ರಘು, ಮಹಾಲಕ್ಷ್ಮಿ ಆಲಗೂಡ , ಶಂಕರ್ ನಾಯ್ಕ,ಮಹದೇವು.ರವಿ.ಶಿವಣ್ಣ,ದೊಡ್ಡಗೌಡ.ಪರಮೇಶ್ವಪ್ಪ ನಾಗಯ್ಯ, ಸಿದ್ದರಾಜು, ನೇರಳೆ ರಂಗಸ್ವಾಮಿ, ಮಾದಪ್ಪ, ರಂಗಸ್ವಾಮಿನಾಯ್ಕ, ಮಹದೇವನಾಯ್ಕ, ಮರಿನಾಯ್ಕ ರೈತ ಮುಖಂಡರು ಮತ್ತು ಊರಿನ ಮುಖ್ಯಸ್ಥರು ಹಾಜರಿದ್ದರು.