ಹೊಸಕೋಟೆ: ಜನರು ಆದ್ಯಾತ್ಮಿಕತೆಯಿಂದ ಯಶಸ್ಸು ಗಳಿಸಲು ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಶ್ರೀಮದ್ ರಾಜಾಪುರ ಸಂಸ್ಥಾನದ ಮಠಾಧ್ಯಕ್ಷರಾದ ಡಾ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರ ನಗರದ ವೀರಮ್ಮನವರ ಮಠದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಪ್ರಯುಕ್ತ ಮಹಾಶರಣೆ ವೀರಮ್ಮನವರ ಹಾಗೂ ಶರಣೆ ಕಾತ್ಯಾಯಿನಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರೊಂದಿಗೆ ಶಾಂತಿ, ನೆಮ್ಮದಿಯ ಜೀವನ ನಡೆಸಲು ಮಾರ್ಗದರ್ಶಕರಾಗಿ ಶ್ರಮಿಸಿದ ಮಹಾನ್ ಶರಣೆ ವೀರಮ್ಮನವರು ಇಂದಿಗೂ ನಗರದ ಬಹಳಷ್ಟು ಭಕ್ತಾಧಿಗಳ ಮನಸ್ಸಿನಲ್ಲಿ ಉಳಿದಿದ್ದು ಅವಿಸ್ಮರಣೀಯರಾಗಿದ್ದಾರೆ. ಇದೇ ರೀತಿ ಇವರ ಆದರ್ಶಗಳನ್ನೆ ಅಳವಡಿಸಿಕೊಂಡಿದ್ದ ಶರಣೆ ಕಾತ್ಯಾಯಿನಿ ಸಹ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊದಲ್ಲಿ ಇವರಿಗೆ ಗೌರವ ಸಲ್ಲಿಸಿದಂತಾಗಲಿದ್ದು ಆಚರಣೆಯು ಸಹ ಸಾರ್ಥಕಗೊಳ್ಳಲಿದೆ.
ಇಂದು ಯುವಕರಲ್ಲಿ ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆಯ ಹೆಚ್ಚಳ ಹಾಗೂ ಸಮೂಹ ಮಾಧ್ಯಮಗಳ ಅತಿಯಾದ ವ್ಯಾಮೋಹದಿಂದಾಗಿ ಸಂಸ್ಕøತಿಗೆ ತೀವ್ರವಾದ ಧಕ್ಕೆಯಾಗುತ್ತಿದೆ. ಇಷ್ಟೇ ಅಲ್ಲದೆ ಬಹಳಷ್ಟು ಮಹಿಳೆಯರು ಸಹ ಇಂದು ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸು ವುದರಲ್ಲಿ ಸಮಯ ವ್ಯರ್ಥ ಮಾಡುತ್ತಿರುವುದು ವಿಷಾದನೀಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಠ ಮಾನ್ಯಗಳು ಆಧ್ಯಾತ್ಮಿಕತೆಯನ್ನು ಉಳಿಸಿ ಬೆಳೆಸಲು ಪ್ರಥಮ ಅಧ್ಯತೆ ನೀಡಬೇಕಾದ್ದು ಅತ್ಯವಶ್ಯವಾಗಿದೆ ಎಂದರು.
ವೀರಮ್ಮನವರ ಮಠದ ಉಮಾ, ನಾಗೇಂದ್ರ,ತಾಲೂಕು ವೀರಶೈವ ಆಗಮಿಕರ ಸಂಘದ ಅಧ್ಯಕ್ಷ ನಟರಾಜಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ರವಿಚಂದ್ರ ಶಾಸ್ತ್ರಿ, ಉದ್ಯಮಿ ಜೆ.ವಿ.ಜ್ಞಾನಮೂರ್ತಿ ಇನ್ನಿತರರು ಭಾಗವಹಿಸಿದ್ದರು. ಮಠಕ್ಕೆ ನೂರಾರು ಭಕ್ತಾಧಿಗಳು ಭೇಟಿ ನೀಡಿದ್ದರು.