ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ವೃತ್ತ ಶಾಖೆಯ ರೈತ ಮುಖಂಡರು ಆನೆ ದಾಳಿಯಿಂದ ಮೃತರಾದ ರೈತ ಶಿವರುದ್ರ ರವರ ಮನೆಗೆ ಭೇಟಿ ನೀಡಿ ಮೃತರ ತಾಯಿ ಯಶೋದಮ್ಮನವರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಆಗುತ್ತಿರುವ ಬೆಳೆ ನಷ್ಟ ಹಾಗೂ ಪ್ರಾಣ ಹಾನಿಯ ಬಗ್ಗೆ ವಿವರಿಸಿ ನರಹಂತಕ ಆನೆಯೊಂದು ಗುಂಪಿನಿಂದ ಬೇರೆ ಆಗಿದ್ದು ಜನರ ಮೇಲೆ ದಾಳಿ ನಿರಂತರ ಮಾಡುತ್ತಿದೆ ಈ ನರಹಂತಕ ಆನೆಯನ್ನು ಅರಣ್ಯ ಅಧಿಕಾರಿಗಳು ಶೀಘ್ರವೇ ಕಾರ್ಯಾಚರಣೆ ಮಾಡಿ ಒಂಟಿ ಆನೆಯನ್ನು ಹಿಡಿದು ಅಭಯಾರಣ್ಯಕ್ಕೆ ಬಿಡುವಂತೆ ಆಗ್ರಹಿಸಿದರು.
ಕೆ ಆರ್ ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ವೃತ್ತದ ಅಧ್ಯಕ್ಷ ನದೀಂ ಪಾಷ, ವೆಂಕಟೇಶ್, ಗೋಪಾಲ್, ಶ್ರೀನಿವಾಸ್, ಚಿಕ್ಕ ಮುನಿಯಪ್ಪ ಈ ವೇಳೆ ಉಪಸ್ಥಿತರಿದ್ದರು