ಬೆಂಗಳೂರು: ಕಾಡಿನಿಂದ ನಾಡಿಗೆ ಆನೆಗಳು ಬರುವುದನ್ನು ನೋಡಿ ಹಾಗೂ ತಡೆಯಲು ಕಾವಲು ಕೆಲಸಕ್ಕೆ ಅರಣ್ಯ ಇಲಾಖೆಯಿಂದ ನೇಮಕವಾಗಿ ನಿನ್ನೆ ರಾತ್ರಿ ಪಾಳ್ಯ ಕೆಲಸದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆನೆಗಳ ಹಿಂಡು ಅಟ್ಟಾಡಿಸಿ ಕೊಂಡು ಬಂದು ಮಾದಣ್ಣ 55 ವರ್ಷ ವ್ಯಕ್ತಿಯನ್ನು ತುಳಿದು ಕೊಂದು ಹಾಕಿರುತ್ತವೆ.
ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಮಾದಣ್ಣ ಮತ್ತು ಯಡಿಯೂರ ಎಂಬ ಇಬ್ಬರನ್ನು ರಾತ್ರಿ ಹೊತ್ತು ಸಂಚರಿಸುವ ಕಾಡಿನ ಆನೆಗಳನ್ನು ನಾಡಿಗೆ ಬರದಂತೆ ಕಾವಲು ಕಾಯಲು ನೇಮಿಸಲಾಗಿತ್ತು.ಈ ಘಟನೆ ರಾತ್ರಿ ಸುಮಾರು ಒಂದು ಗಂಟೆಗೆ ಜರುಗಿದೆ ಎಂದು ಅರಣ್ಯ ಅಧಿಕಾರಿಗಳು ಬನ್ನೇರ್ಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.