ಬೆಂಗಳೂರು: ಸಿಸಿಬಿ ಪೊಲೀಸರು ಗುಜರಾತ್ ರಾಜ್ಯದಿಂದ ಆನ್ಲೈನ್ನಲ್ಲಿ ವಂಚಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.
ಈ ಆರೋಪಿಗಳು ಮಿಷೋ ಎನ್ನುವ ಆಪ್ ಮೂಲಕ ಜನರಿಗೆ ಸುಮಾರು 5 ಕೋಟಿಗೂ ಹೆಚ್ಚಿನ ವಹಿವಾಟುಗಳನ್ನು ಮಾಡಿ ಜನರಿಗೆ ವಂಚಿಸುತ್ತಿದ್ದರು
ಎಂದು ಸಿಸಿಬಿ ಪೊಲೀಸರು ತಿಳಿಸಿರುತ್ತಾರೆ.
ಇವರುಗಳಿಂದ ವಿವಿಧ ಬ್ಯಾಂಕ್ ಗಳಲ್ಲಿ 5 ಕೋಟಿ 80 ಲಕ್ಷ ರೂ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಆರೋಪಿಗಳು ಸಾರ್ವಜನಿಕರಿಗೆ ಆನ್ಲೈನ್ ಮೂಲಕ ವಸ್ತುಗಳನ್ನು ನಿಮಗೆ ಬಂದಿವೆ ಎಂದು ಹೇಳಿ ವಂಚಿಸುತ್ತಿದ್ದರು ಎಂದು ತಿಳಿಸಿರುತ್ತಾರೆ.