ಬೆಂಗಳೂರು: ಆರೋಪಿ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ಮತ್ತು ಕಾಲುನೋವಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಆದರೆ ದರ್ಶನ್ ಆಪರೇಷನ್ಗೆ ಹಿಂದೇಟು ಹಾಕುತ್ತಿದ್ದು, ಮುಂದಿನ ೧೦ ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ.
ನಟ ದರ್ಶನ್ಗೆ ಈಗಾಗಲೇ ಕನ್ಸರ್ವೇಟಿವ್ ಚಿಕಿತ್ಸೆ ನೀಡುತ್ತಾ ಇದ್ದು, ಔಷಧಿ ಮತ್ತು ಮಾತ್ರೆಗಳನ್ನ ನೀಡಿ ಗುಣಮುಖ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ದರ್ಶನ್ಗೆ ಬೆನ್ನು ನೋವು ಮತ್ತು ಕಾಲು ನೋವು ಇನ್ನೂ ಕಡಿಮೆ ಆಗುತ್ತಿಲ್ಲ. ಹೀಗಾಗಿ ಮುಂದಿನ ೧೦ ದಿನಗಳ ಕಾಲ ಕೂಡ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.
ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಹುಷಾರಾಗದಿದ್ದರೆ ಶಸ್ತçಚಿಕಿತ್ಸೆ ಮಾಡಬೇಕಾಗುತ್ತೆ. ಒಂದು ವೇಳೆ ಶಸ್ತçಚಿಕಿತ್ಸೆ ಒಪ್ಪದಿದ್ದರೆ ಹೆಚ್ಚಿನ ಚಿಕಿತ್ಸೆ ಅಥವಾ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.