ಬೆಂಗಳೂರು: ಯಾವುದೇ ಶಿಫಾರಸ್ಸು ಅಥವಾ ಯಾವುದೇ ಆಸೆ ಆಕಾಂಕ್ಷೆಗಳಿಗೆ ಮತ್ತು ಒತ್ತಡಕ್ಕೆ ಮಣಿಯದೆ ಬೆಂಗಳೂರು ನಗರ ಪೊಲೀಸ್ ಪೇದೆಗಳಿಂದ ಹಿಡಿದು ಎಎಸ್ಐ ತನಕ ಪದೋನ್ನತಿಯನ್ನು ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ತಮ್ಮ ಮಾಸಿಕ ಪರೇಡ್ನಲ್ಲಿ ತಿಳಿಸಿದರು.
ಪದೋನ್ನತಿಗೆ ಬರುವ ಸಿಬ್ಬಂದಿಗಳು ಸಹ ಒತ್ತಡ ತರಬಾರದು ಎಂದು ಕೋರಿದರು. ಯಾವುದೇ ಏಜೆಂಟ್ಗಳನ್ನು ಸಹ ಅಥವಾ ಮಧ್ಯವರ್ತಿಗಳನ್ನು ನಂಬಬಾರದೆಂದು ತಿಳಿಸಿದರು.ಪ್ರತಿಯೊಬ್ಬ ಅಭ್ಯರ್ಥಿಯ ಸಮಾಲೋಚನೆ ನಡೆಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಬೇರೆ ಇಲಾಖೆಯಲ್ಲಿಯೂ ಸಹ ಇದೇ ತರಹ ಪದೋನ್ನತಿ ಮತ್ತು ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಖಾಕಿ ಸಮಾವಸ್ತ್ರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.ಆಡುಗೋಡಿಯಲ್ಲಿ ಆಯುಕ್ತರ ಮಾಸಿಕ ಪೆರೇಡ್ ನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ದಯಾನಂದ್ ರವರು ಇತ್ತೀಚೆಗೆ ನಡೆದಂತಹ ಗಂಭೀರ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉತ್ತಮ ಕಾರ್ಯ ನಿರ್ವಹಿಸಿದರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಉತ್ತಮ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಇಲಾಖೆಯ 40 ಜನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನ ಪತ್ರವನ್ನು ನೀಡಿದರು. ಪೂರ್ವ ವಿಭಾಗದ ಡಿಸಿಪಿ ದೇವರಾಜ್ ರವರ ನೇತೃತ್ವದಲ್ಲಿ ಪರೇಡ್ ಉತ್ತಮವಾಗಿ ನಡೆಸಿಕೊಟ್ಟಿದ್ದರಿಂದ ಪ್ರಶಂಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಮತ್ತು ಡಿಸಿಪಿ ಹಾಗೂ ಎಸಿಪಿ ವರ್ಗದ ಅಧಿಕಾರಿಗಳು ಉಪಸ್ಥಿತರಿದ್ದರು. ಶ್ವಾನದಳ , ಪೊಲೀಸ್ ಬ್ಯಾಂಡ್ ಸೇರಿದಂತೆ 10 ತುಕಡಿಗಳು ಆಯುಕ್ತರಿಗೆ ಗೌರವ ಒಂದನೇ ಸಲ್ಲಿಸಿದರು.