ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ.ನಮ್ಮ ಸಾಧನೆಯನ್ನು ಇತಿಹಾಸ ನೆನೆಯುವಂತೆ ಮಾಡಬೇಕು.ಆಗಷ್ಟೇ ನಾವು ಬದುಕಿದ್ದಕ್ಕೆ ಸಾರ್ಥಕತೆಯಿರುತ್ತದೆ. ಸ್ವತಃ ನೀನೇ ಒಂದು ಸುಂದರ ಕಲಾಕೃತಿ ನೀನು ಬೇರೆ ಯಾರೋ ಆಗುವ ಅವಶ್ಯಕತೆ ಇಲ್ಲವೇ….ಇಲ್ಲ.
ಕುಲ ಕುಲ ಕುಲವೆಂದು
ಹೊಡೆದಾಡದಿರಿ ನಿಮ್ಮ
ಕುಲದ ನೆರೆಯನೇನಾದರೂ
ಬಲ್ಲಿರಾ
ಹುಟ್ಟಿದ ಯೋನಿಗಳಿಲ್ಲ
ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೆನು
ಕಿರಿದೇನು
ನೆಟ್ಟನೆ ಸರ್ವಜ್ಞ ನೆನೆಕಂಡ್ಯ
ಮನುಜಾ…
ಎಂದು ಭಕ್ತ ಕನಕದಾಸರು ಹೇಳಿರುವುದನ್ನು ಕೆಲವರು ತಮ್ಮ ಬದುಕಿನಲ್ಲಿ ಮಾತಾಡದೇ ಮೌನದಿಂದಲೇ ಕ್ರಾಂತಿ ಮಾಡಿ ಎನೇ… ಎಷ್ಟೇ ಅಡೆತಡೆಗಳು ಮಹಾಸಾಗರದಂತೆ ಬಂದರು.
‘ನೀ ಮಾಯೆಯೊಳಗೋ
ನಿನ್ನೊಳು ಮಾಯೆಯೋ
ನೀ ದೇಹದೊಳಗೋ
ನಿನ್ನೊಳು ದೇಹವೋ
ಕಾಗಿನೆಲೆಯಾದಿಕೇಶವ
ಉಸುರಲೆನ್ನಳವಲ್ಲ ಎಲ್ಲಾ ನಿನ್ನೊಳಗೆ’
ಎಂದು ಸದಾ ಒಳ್ಳೆಯದನ್ನೇ ಮಾಡುತ್ತಾ, ತಮ್ಮ ತನು ಮನ ಧನವನ್ನು ಅಸಹಾಯಕರಿಗೆ ಪ್ರೀತಿಯಿಂದ ‘ ಶ್ರೀ ಕೃಷ್ಣ ಪರಮಾತ್ಮನನ್ನು ‘ ನೆನೆಯುತ್ತಾ ತಮ್ಮ ನಿತ್ಯದ ಕಾಯಕದಲ್ಲೇ ಕೈಲಾಸ ಕಾಣುತ್ತಿದ್ದ ದಂತ ಕಥೆಯ ಹೆಮ್ಮೆಯ ನಾಯಕಿ ಸದಾ ನಗು ಮೊಗದ ಮಂದಹಾಸ ಚೆಲುವೆಯ ಕಾರಂಜಿಯಾಗಿರುತ್ತಾರೆ.
ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಎಂಬುದು ಎಲ್ಲರಿಗೂ ಸದಾ ಕಾಲ ಯಶಸ್ಸನ್ನುಗಳಿಸಿಕೊಡುತ್ತದೆ ಎಂದು ತಾವೇ ಮಾದರಿಯಾಗಿ ನಮ್ಮ ನಡುವೆಯೇ ವಿರಾಟ ಸ್ವರೂಪಿಣಿಯಾಗಿ, ಇಂಪಾಗಿ, ವೀಣೆ ನುಡಿಸುವ, ಭುಜಂಗ ಶಾರದೆಯಾಗಿ, ದೇವರು ಜವಾಬ್ದಾರಿಯನ್ನು ಕೊಟ್ಟಿದ್ದಾನೆ, ಜೊತೆಗೆ ಅದನ್ನು ಹೊರುವ ಭುಜವನ್ನು ಕೊಟ್ಟಿದ್ದಾನೆ ಎಂದು ಹೇಳುತ್ತಾ ಕ್ಷಣ ಕ್ಷಣವು ಉತ್ಸಾಹ ಉಲ್ಲಾಸವನ್ನು ಸಂಭ್ರಮಿಸುತ್ತಾ ಮನಸ್ಸಿಗೆ ನವಿಲಿನಂತೆ ಪ್ರಫುಲ್ಲತೆಯಿಂದ ತನ್ನಂತರಂಗದ ಮಧುರ ಧ್ವನಿಯ ತರಂಗ ತಾವೇ ಕೇಳುವ, ಬದುಕಿನ ಘಟನೆಗಳನ್ನು ಹೇಗೆ ಎದುರಿಸುತ್ತೇವೆ ಎಂಬುದರ ಮೇಲೆ ಯಶಸ್ಸು ನಿರ್ಧಾರವಾಗುತ್ತದೆಂದು ಸದಾ ಆ ದಾರಿಯಲ್ಲಿ ಮುನ್ನುಗ್ಗುವ, ಡಾ.ಜಿ.ವೈ ಪದ್ಮನಾಗರಾಜುರವರು ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು, ಪತ್ರಿಕೆಯ ಸಂಸ್ಥಾಪಕರು ಮಾನ್ಯ ವಿ.ನಾಗರಾಜುರವರು ಎರಡು ದಶಕಗಳ ಹಿಂದೆಯೇ ನೊಂದವರ ಶೋಷಿತರ ಧ್ವನಿಯಾಗಿದ್ದವರು.
ಇಂದು ಸಂಜೆ ಪತ್ರಿಕೆಯ ಸಾರಥ್ಯವನ್ನು ಅಜಿತ್ ಸಾಗರ್.ಎನ್ರವರು ವಹಿಸಿದ್ದಾರೆ. ಪದ್ಮಾವರು ತಮ್ಮ ಜೀವನದಲ್ಲಿ ಸದಾ ಚೈತ್ರಾ ಕಾಲವೇ ಚಿರಾಯುವಾಗಲೆಂದು ಬಯಸುವ ಭೂಶಿರವಾಗಿದ್ದಾರೆ. ಹೊಸ ಆಲೋಚನೆ ತಲೆಗೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗುವುದು ಮಾತ್ರವೇ ಎಲ್ಲಾ ಬಗೆಯ ವಿಜಯಕ್ಕೆ ತಳಹಾದಿಯಾಗಿದೆ ಎಂದು ಬಲವಾಗಿ ನಂಬಿಕೊಂಡು ” ಕ್ಷಮೆಯೇ ಧರ್ಮ, ಕ್ಷಮೆಯೇ ಯಜ್ಞ, ಕ್ಷಮೆಯೇ ವೇದ, ಕ್ಷಮೆಯೇ ಶಾಸ್ತ್ರ, ಕ್ಷಮೆಯೇ ಮನುಷ್ಯತ್ವ, ಸಾವಿನೊಳು ಮರುಗದಿರು, ಜೀವದೊಳು ಹಿಗ್ಗದಿರು ಎಂದು ಪ್ರೀತಿಯ ಅರಮನೆಯಲ್ಲಿ ಸುಂದರ ನೆನಪುಗಳೊಂದಿಗೆ ಪ್ರತಿಗಳಿಗೆಯೂ ವಿಹರಿಸುತ್ತಾರೆ.
ಸುಮಾರು ನಾಲ್ಕು ದಶಕಗಳ ಹಿಂದೆಯೇ ಪ್ರೀತಿ ಮತ್ತು ಮನುಜ ಮತದೆಡೆಗೆ ಅಂತರ್ಜಾತಿ ವಿವಾಹವಾಗಿ ತಮ್ಮ ಬದುಕಿಗೆ ದಿಟ್ಟತೆಯಿಂದ ನಡೆದು ಮೈಲಿಗಲ್ಲಾಗುತ್ತಾ ಎಲ್ಲದರಲ್ಲೂ ‘ಸೈ’ ‘ಭೇಷ’ ಎನಿಸಿಕೊಳ್ಳುತ್ತಾ ಹುಬ್ಬೆರಿಸುವಂತೆ ಮಾಡುತ್ತಿದ್ದಾರೆ. ಡಾ.ಜಿ.ವೈ ಪದ್ಮನಾಗರಾಜುರವರು.
ಮಾನ್ಯ ವಿ.ನಾಗರಾಜುರವರು ಬಹುಜನ ಚಳುವಳಿಯನ್ನು ಒಪ್ಪಿಕೊಂಡಿದ್ದರು, ಪೆರಿಯಾರ್ ಹೋರಾಟವನ್ನು ಅಪ್ಪಿಕೊಂಡಿದ್ದವರು, ಹಾಗೆ ತಮ್ಮ ಕೊನೆಯ ಉಸಿರಿನವರೆಗೂ ಧೈರ್ಯದಿಂದ ಬದುಕಿನ ವೈಚಾರಿಕತೆ ವೈಜ್ಞಾನಿಕತೆಯ ಮಹಾನ್ಸಂತ ಆಗಿದ್ದರು.
ಟೈಗರ್ ನಾಗರಾಜು ಎಂದೇ ಜನತೆ ಗುರುತಿಸುತ್ತಿದ್ದರು.ಸಂತೃಪ್ತಿಯ ಜೀವನ ಸಾಗಿಸಿದರು ಬಡವರ ಬಗ್ಗೆ ಸದಾ ಕಾಲ ಸಹಾಯ ಹಸ್ತಕ್ಕೆ ಮುಂದಾಗುವ, ಅನ್ನ, ಅಕ್ಷರಕ್ಕಾಗಿ, ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಹೋರಾಡಿದವರು. 2021 ರಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ತಮಟೆಯ ಎಚ್ಚರಿಕೆಯ ಸದ್ದು ನಿಂತಿತು. ನಿತ್ಯವು ನಾಗರಾಜುರವರ ಅಮರ ಪ್ರೀತಿಯ ಜೊತೆಗೆ ಜೀವನ ಪಾಠವನ್ನು ಕಲಿತ ಪದ್ಮರವರು ಎದೆಗಾರಿಕೆಯಿಂದ ಜೀವನ ನಿಂತ ನೀರಲ್ಲ, ಸತತ ಹರಿಯುವ ಪ್ರವಾಹ, ಕಾಲಕಾಲಕ್ಕೂ ಕಾಣುವ ದೃಶ್ಯಗಳನ್ನು ಸಂತೋಷದಿಂದ ಅನುಭವಿಸಿ, ಹಿಂದಿನದನ್ನು ನೆನೆದು ಕೊರಗುತ್ತಾ ಮುಂದೆ ನಡೆಯುವುದಕ್ಕೆ ಅಂಜಿದರೆ, ಅವಕಾಶಗಳು ಕಳೆದು ಹೋಗುತ್ತವೆ ಎಂದು ತಿಳಿದು, ಆತ್ಮವಿಶ್ವಾಸ ಸಫಲತೆಯ ಪ್ರಮುಖ ರಹಸ್ಯ, ಅವಮಾನವಾದರೂ ಅರಳುತ್ತಿರು ಅದೇ ಮುಂದಿನ ದಿನಗಳಲ್ಲಿ ಜ್ಞಾನದ ಆರಂಭದ ಬಿಂದುವಾಗುತ್ತದೆ.
ಪ್ರೇಮ ಒಂದು ವೇದ ಪೂರ್ಣ ಪ್ರಸನ್ನತೆ, ಪ್ರೀತಿಯು ಪ್ರಕೃತಿಯ ಕೊಡುಗೆ, ಪ್ರೀತಿಯೊಂದೇ ವಿಶ್ವವನ್ನು ಸಂಚಲನೆಗೆ ಸಾಕ್ಷೀಯಾಗುತ್ತದೆ. ವೈವಿಧ್ಯವೇ ಜೀವನದ ವ್ಯಂಜನ. ಒಳ್ಳೆಯ ವಿಚಾರಕ್ಕೆ ನೂರು ಕೈಗಳು ಸಹಾಯಕ್ಕೆ ಬರುವವು.ನಂಬಿಕೆ ಇದ್ದರೆ ಮೌನವು ಅರ್ಥವಾಗುತ್ತದೆ. ಡಾ.ಜಿ.ವೈ ಪದ್ಮನಾಗರಾಜುರವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯವರಾದ ಸನ್ಮಾನ್ಯ ಜಿ.ಎಚ್.ಯದುರಾಜುರಾವ್ ಮತ್ತು ಕೃಷ್ಣವೇಣಿ ದಂಪತಿಗಳ ಸುಪುತ್ರಿ ನಾಗರತ್ನ, ವಿದ್ಯಾ, ಮುರುಳಿ, ಪದ್ಮ ಹೀಗೆ ನಾಲ್ಕು ಜನ ಮಕ್ಕಳು.
ಪದ್ಮರವರಿಗೆ ಸಂಗೀತ ಮತ್ತು ವೀಣೆವಾದ್ಯ ನುಡಿಸುವುದು ರಕ್ತಗತವಾಗಿ ಬಳುವಳಿಯಾಗಿ ಬಂದಿದ್ದು ಹಾಗಾಗಿಯೇ ಪದ್ಮರವರು ‘ಶ್ರೀ ವಾಣಿ ಸಂಗೀತ ವಿದ್ಯಾಲಯವನ್ನು ಸಂಸ್ಥಾಪಿಸಿ ಉಚಿತವಾಗಿ ತರಬೇತಿ ನೀಡಿ ಪ್ರತಿಭಾವಂತ ಪ್ರತಿಭೆಯನ್ನು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ” ನಿನಗೆ ನೀನೇ ಬೆಳಕು” ಕೃತಿಯ ಮೂಲಕ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ‘ಮಹಿಳಾ ಕ್ರಾಂತಿಯ ಸಾಕ್ಷಾತ್ಕಾರ’ ಮಹತ್ವದ ಗ್ರಂಥ ಮುದ್ರಣಕ್ಕೆ ಸಿದ್ಧವಾಗಿದೆ.
ಅಖಿಲ ಕರ್ನಾಟಕ 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಸಂಗೀತ, ನಟನೆ, ಸಮಾಜ ಸೇವೆ, ಸಾಹಿತ್ಯ, ಪತ್ರಿಕೋದ್ಯಮದಲ್ಲಿ ಹೆಸರುಗಳಿಸಿದವರು.ಕನ್ನಡ ಚಲನಚಿತ್ರ ‘ಮಾತಂಗಿ ದೀವಟಿಕೆಯ’ ನಿರ್ಮಾಪಕರಾಗಿದ್ದಾರೆ ಈ ಸಿನಿಮಾ ಹತ್ತು ಅಂತರ್ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ, ಅಷ್ಟೇ ಅಲ್ಲದೆ ಪನೋರಮಾ, ಇಂಡಿಯನ್ ಐಕಾನ್ ದಾದಾಸಾಹೇಬ ಫಾಲಕೇ ಪ್ರಶಸ್ತಿಯ ಗರಿ ತನ್ನ ಹಿರಿಮೆಗೆ ಸೇರ್ಪಡೆಯಾಗಿಸಿಕೊಂಡಿದೆ.
ಕರ್ನಾಟಕ ಜಾನಪದ ಪರಿಷತ್ತು ‘ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯ ಹಾರವನ್ನು ಕೊರಳಿಗೆ ಹಾಕುವುದರ ಮೂಲಕ ನವಂಬರ್ 2024ರ ವರ್ಷ ಸಾರ್ಥಕ ಮಾಡಿಕೊಂಡಿದೆ, ಶಿಸ್ತು, ಬದ್ಧತೆ, ಸ್ವಚ್ಛ ಪರಿಸರ, ಹಸಿರೇ ಉಸಿರಾಗಿಸಿಕೊಂಡ ಡಾ.ಜಿ.ವೈ ಪದ್ಮನಾಗರಾಜುರವರ ಬದುಕು ಸ್ಪೂರ್ತಿ ನೀಡುತ್ತದೆ. ಶಿಕ್ಷಣ ಕ್ರಾಂತಿಯ ಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆಯ ಹೆಜ್ಜೆಯ ಗುರುತಿನೊಂದಿಗೆ ಮುಂದೆ ಸಾಗುತ್ತಿದ್ದಾರೆ. ಜೀವಪರ ಸಮಾಜ ಪರವಾದ ಅವರ ಉದಾತ್ತಾ ಶ್ರೇಷ್ಠ ಗುಣಮಟ್ಟದ ವಿಚಾರಧಾರೆ ಸದಾ ಪ್ರವಾಹವಾಗಿ ಜನಮನ, ಮನೆ ತಲುಪಲೆಂದು ಡಾ.ಜಿ.ವೈ ಪದ್ಮನಾಗರಾಜುರವರು ನೂರಾರು ಕಾಲ ಆರೋಗ್ಯ, ನೆಮ್ಮದಿ, ಯಶಸ್ಸು, ವಿಜಯೋತ್ಸವ ಅವರ ಮಡಿಲು-ಉಡಿ ತುಂಬಲೆಂದು ಸದಾ ಶುಭಾಶಯಗಳು ಕೋರುತ್ತೇವೆ.
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ… ಎಂದು ಎದೆ ತುಂಬಿ ಅಳು ಮಿಶ್ರಿತ ನಗುವಿನೊಂದಿಗೆ ತಮ್ಮೆಯತೆಯಿಂದ ಶ್ರೀ ಕೃಷ್ಣನ ನೆನೆಯುತ್ತಾರೆ.
ನವಂಬರ್ ಮಾಹೆಯಲ್ಲಿ ಜನಿಸಿದವರು ಐಶ್ವರ್ಯ ರೈ, ಶಾರುಖ್ ಖಾನ್, ವಿರಾಟ್ ಕೊಹ್ಲಿ, ಸಿ.ವಿ ರಾಮನ್, ಕಮಲ್ ಹಾಸನ್, ಅಬ್ದುಲ್ ಕಲಾಂ, ಸಲೀಂಅಲಿ, ಪಂಡಿತ್ ಜವಾಹರ್ಲಾಲ್ ನೆಹರು ಮುಂತಾದವರು ಸ್ವಸಾಮಥ್ರ್ಯದಿಂದ ಖ್ಯಾತನಾಮರಾಗಿದ್ದಾರೆ.
ಡಾ.ಜಿ.ವೈ ಪದ್ಮನಾಗರಾಜುರವರನ್ನು ರಾಷ್ಟ್ರ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು ಅರಸಿಕೊಂಡು ಮನೆಬಾಗಿಲಿಗೆ ಬರಲು ಕಾರಣ ಅವರಲಿರುವ ಜಾತ್ಯತೀಯ ಮತ್ತು ಧರ್ಮತೀತವಾದ ಮಾನವತವಾದಿಯ ಗುಣಗಳು ಹಾಗೂ ಎಲ್ಲರನ್ನು ಪ್ರೀತಿಸುವ ಮಹಾನ್ ಸಾಗರವೇ ಅವರಾಗಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಚಿನ್ನದ ಪದಕಗಳು ಅವರ ಕೀರ್ತಿ ನಾಡಿನಲ್ಲಿ ಹೊಸ ಛಾಪು ಮುಡಿಸುತ್ತ ಹೊಸ ದಾಖಲೆ ಮಾಡುತ್ತಲಿವೆ. ಅವರಿಗೆ ಈ ವಿಶೇಷ ದಿನದಂದು ಸಮಸ್ತ ಜನತೆ ಶುಭ ಹಾರೈಸುತ್ತೇವೆ. ನಂಬಿಕೆ ಇರಲಿ ಸಮಯ ಎಲ್ಲವನ್ನು ಬದಲಾಯಿಸುತ್ತದೆ.