ಪ್ರಚಾರದ ವಿಚಾರದಲ್ಲಿ ನಾನಾ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ಆರಾಮ್ ಅರವಿಂದ್ ಸ್ವಾಮಿ. ಸಿನಿಮಾ ಇದೇ ತಿಂಗಳ 22ಕ್ಕೆ ಚಿತ್ರ ತೆರೆಗೆ ಬರ್ತಿದೆ. ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಘೀರ ಖ್ಯಾತಿಯ ಶ್ರೀಮುರಳಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ನಿರ್ದೇಶಕ ಸೂರಿ ಹಾಗೂ ಇಡೀ ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಈ ವೇಳೆ ಉಪಸ್ಥಿತರಿದ್ದರು.ಇದೇ ವೇಳೆ ನಟ ಶ್ರೀಮುರಳಿ ಮಾತನಾಡಿ, ಅನೀಶ್ ಅವರಿಗೆ ಒಳ್ಳೆದಾಗಲಿ. ಆರಾಮ್ ಅರವಿಂದ್ ಸ್ವಾಮಿ ನನಗೆ ಟೈಟಲ್ ತುಂಬಾ ಇಷ್ಟವಾಯಿತು ಅಭಿ. ನಿಮ್ಮ ಟೀಂನಲ್ಲಿ ಒಬ್ಬರಿಗೊಬ್ಬರಿಗೆ ಪ್ರೀತಿ ಕೊಡುತ್ತಿದ್ದೀರ. ನಮ್ಮ ಹೀರೋ ಬೆಳೆಯಬೇಕು ಅಂತಾ ನೀವು ಹೀರೋಗೆ ಸಪೋರ್ಟ್ ಮಾಡುವುದು.
ಪ್ರೊಡ್ಯೂಸರ್ ಒಳ್ಳೆದಾಗಲಿ ಎಂದು ಹೀರೋ ಮಾತನಾಡುತ್ತಾರೆ. ಈ ಫೀಲಿಂಗ್ ಇಷ್ಟವಾಯ್ತು. ಸುಖ ಇರುವ ಕಡೆ ನೋವು ಬರುವುದು. ಸಕ್ಸಸ್ ಆದ್ಮೇಲೆ ಫೇಲ್ಯೂರ್ ಬರುವುದು. ಫೇಲ್ಯೂರ್ ಆದ್ಮೇಲೆ ಮತ್ತೆ ಸಕ್ಸಸ್ ಬರುತ್ತದೆ. ಈ ನಿಜಾಂಶ ತಿಳಿದುಕೊಳ್ಳಬೇಕು. ಜರ್ನಿ ಜಾಗದಲ್ಲಿ ತಾಳ್ಮೆ ಇರಬೇಕು. ಬಘೀರ ಆಗಿದ್ದು ಲಕ್ಕಿಯಿಂದಲ್ಲ. ಹಾರ್ಡ್ ವರ್ಕ್. ಶ್ರಮದಿಂದ ಸಕ್ಸಸ್ ಸಿಕ್ಕಿತು. ಸಕ್ಸಸ್ ಕೊಡುವುದು ಅಭಿಮಾನಿಗಳು. ನಿಮಗೆ ಒಳ್ಳೆದು ಆಗುತ್ತದೆ. ಅದಕ್ಕಾಗಿ ಕಾಯಬೇಕು. ಮಿಲನಾ ನಿಮ್ಮ ಬಗ್ಗೆ ಹೆಮ್ಮೆಯಾಯ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.
ಟಿಕೆಟ್ ಬೆಲೆ 99 ರೂಆರಾಮ್ ಅರವಿಂದ್ ಸ್ವಾಮಿ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನವೆಂಬರ್ 22 ರಂದು ಎಲ್ಲೆಡೆ ಬರ್ತಿರೋ ಈ ಚಿತ್ರದ ಟಿಕೆಟ್ ಕೇವಲ 99 ರೂಪಾಯಿ ಆಗಿದೆ. ಆದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೆಟ್ ಬೆಲೆ ಇರಲಿದೆ.