ಕೆ.ಆರ್.ಪೇಟೆ: ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ. ಕೆ.ಆರ್. ಪೇಟೆ ಮತ್ತು ಕಿಕ್ಕೇರಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಆರ್.ಟಿ.ಓ ಮಲ್ಲಿಕಾರ್ಜುನ್ ರವರನ್ನು ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಅವರ ಕಚೇರಿಯಲ್ಲಿ ಅಭಿನಂದಿಸಿ ಗೌರವಿಸಿದರು.
ಅಭಿನಂದಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಜಾತಿ-ಧರ್ಮಗಳ ಭೇದ ಭಾವವಿಲ್ಲದೆ ಸೇವಾ ಮನೋಭಾವನೆಯಿಂದ ಜನಮನ್ನಣೆ ಗಳಿಸಿದ್ದಾರೆ. ಹಾಗೂ ನಾವು ಮಾಡುವ ಯಾವುದೇ ಕಾಯಕ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಜೊತೆಗೆ ಇಚ್ಚಾ ಶಕ್ತಿ ಇದ್ದರೆ ಗೌರವಾನ್ವಿತ ಸ್ಥಾನಮಾನಗಳು ವಿರೋಧವಿಲ್ಲದೆ ದೊರಕುತ್ತವೆ ಎಂಬುದಕ್ಕೆ ಸಮಾಜ ಸೇವಕ ಹಾಗೂ ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಉದಾಹರಣೆಯಾಗಿ ನಮ್ಮ ಸಂಘಕ್ಕು ಗೌರವ ಹೆಚ್ಚಿಸಿದ್ದಾರೆ.
ನಿಜಕ್ಕೂ ಸಮಾಜ ಸೇವಾ ಕಳಕಳಿ ಇರುವ ಮಲ್ಲಿಕಾರ್ಜುನ್ ರವರಿಗೆ ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಗೌರವಾನ್ವಿತ ಸ್ಥಾನಗಳು ದೊರಕಬೇಕು ಎಂದರು.
ಬಳಿಕ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ನಾನು ಎಂದಿಗೂ ಯಾವುದೇ ಸ್ಥಾನಮಾನಗಳಿಗೆ ಆಕಾಂಕ್ಷಿಯಲ್ಲ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ ಮಾತ್ರ ಅದಕ್ಕೆ ಪೂರಕವಾಗಿ ಕಾಯಾ ವಾಚ ಮನಸ್ಸಿನಿಂದ ಸಂಘಟನೆಯ ಮೂಲಕ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮ ವಹಿಸುತ್ತೇನೆ.ಈ ಪ್ರೀತಿಯ ಗೌರವ ಅಭಿನಂದನೆಗಳು ನನಗೆ ಮತ್ತಷ್ಟು ಜವಾಬ್ದಾರಿಯ ಎಚ್ಚರಿಕೆ ಗಂಟೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ತಿಲಕ್ ರಾಜ್, ಕಿಕ್ಕೇರಿ ವೀರೇಶಪ್ಪ, ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಆರ್ ರಾಜೇಶ್, ಸದಸ್ಯರಾದ ನಾರಾಯಣಗೌಡ, ಶಿವರಾಮು,ಮೊಟ್ಟೆ ಮಂಜು, ಪ್ರಸನ್ನ, ನಳಿನ, ಸುನೀತ, ಮೇಲ್ವಿಚಾರಕಿ ಗುಣ ಶ್ರೀ, ಸಿಬ್ಬಂದಿ ಶಶಿಪ್ರಭಾ, ಸಂಗೀತ, ವಿವೇಕ್, ಪದ್ಮ, ಜ್ಯೋತಿ, ವಿವೇಕ್, ಪ್ರಕಾಶ್, ಆರ್ಟಿಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಸೇರಿದಂತೆ ಉಪಸ್ಥಿರಿದರು.