ದೇವನಹಳ್ಳಿ: ರಾಷ್ಟಿಯ ಹೆದ್ದಾರಿಯ ಬಾರಿ ವಾಹನಗಳ ವೇಗದ ಸಂಚಾರದಿoದ ಆಲೂರು ದುದ್ದನಹಳ್ಳಿ ಗೇಟ್ ಬಳಿ ಕಳೆದ ಹಲವು ವರ್ಷಗಳಿಂದ ಸರಣ ಅಪಘಾತಗಳಿಂದ ಸಾವು-ನೋವು ಹೆಚ್ಚಾ ಗುತ್ತಿರುವ ಹಿನ್ನಲೆಯಿಂದ ಸಂಬಂಧ ಪಟ್ಟವರು ಕೂಡಲೇ ಅಂಡರ್ ಪಾಸ್ ನಿರ್ಮಾಣ ಮಾಡು ವಂತೆ ಸುತ್ತ-ಮುತ್ತಲಿನ ಗ್ರಾಮಸ್ಥರ ಒತ್ತಾಯಿಸಿದರು.
ದೇವನಹಳ್ಳಿ ತಾಲ್ಲೂಕಿನ ದುದ್ದನಹಳ್ಳಿ ಗ್ರಾಮದಲ್ಲಿ ತೆರಿಗೆ ವಸೂಲಾತಿ ಸಂಬoಧ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಜಮಾಹಿಸಿದ್ದ ವೇಳೆ ಕುಂದಾಣ ವ್ಯವ ಸಾಯ ಸೇವಾ ಸಹಕಾರ ಸಂಘದ ಮಾಜಿ ಅದ್ಯಕ್ಷ ಮುನಿರಾಜು ಅವರು ಮಾತನಾಡಿ, ಗ್ರಾಮೀಣ ಭಾಗದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಸಮಸ್ಯೆ, ಮಳೆ ಎತ್ತರದ ಪ್ರದೇಶದಿಂದ ಹರಿಯುವ ಮಳೆ ನೀರು ರಸ್ತೆಗಳ ಮೇಲೆ ಹರಿದು ಹೋಗುತ್ತಿದೆ ಜತೆಗೆ ಹಳ್ಳ-ಕೊಳ್ಳಗಳಲ್ಲಿ ದೀರ್ಘಾವದಿ ಸಮಯ ನಿಂತು ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ, ಸಮರ್ಪಕ ಚರಂಡಿಗಳಿಲ್ಲ, ರಾಷ್ಟಿಯ ಹೆದ್ದಾರಿ ಪ್ರಾದಿಕಾರದ ಸಂಬ0ಧ ಪಟ್ಟವರು ಸ್ಥಳ ತನಿಕೆ ಮಾಡಿ, ಹತ್ತಹಳ್ಳಿ ಗ್ರಾಮಸ್ಥರ ಅನುಕೂಲತೆಗಳನ್ನು ಪರಿಹರಿಸಬೇಕು.
ಸಾರಿಗೆ ಸೌಕರ್ಯಗಳು ಸಮರ್ಪಕವಾಗಿಲ್ಲ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಯಿಂದ ಜಿಲ್ಲಾಡಳಿತ ಕಛೇರಿಗೆ 2 ಕಿಲೋ ನಡೆದುಕೊಂಡು ಹೋಗಲು ಕಷ್ಟ ಸಾದ್ಯವಾಗಿದೆ. ಬಸ್ ತಂಗುದಾಣದ ಬಳಿ ಸರ್ಕಾರಿ ಬಸ್ಗಳು ನಿಲುಗಡೆ ಮಾಡದೆ ಗ್ರಾಮಸ್ಥರು ದೂರ ದೂರದ ಪ್ರಯಾಣಕ್ಕೆ ಅನಾನೂಕುಲ ಆಗುತ್ತಿದೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್.ಮುನಿಯಪ್ಪ ಅವರು ಕೇಂದ್ರ ಮಂತ್ರಿಗಳಾಗಿದ್ದವರು. ಸಂಬoಧಪಟ್ಟ ರಾಷ್ಟಿಯ ಹೆದ್ದಾರಿ ಪ್ರಾದಿ ಕಾರದ ಅದಿಕಾರಿಗಳ ಜತೆ ತುರ್ತಾಗಿ ಚರ್ಚಿಸಿ ಗ್ರಾಮಸ್ಥರ ಸಮ ಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಘು, ಬೈರೇ ಗೌಡ, ಹಾಲು ಉತ್ಪಾಧಕರ ಸಹಕಾರ ಸಂಘದ ಅದ್ಯಕ್ಷ ಮಂಜುನಾಥ್, ಮುನಿ ಶಾಮಪ್ಪ, ನಾಗ ರಾಜು, ಗಜೇಂದ್ರ, ಬಚ್ಚೇಗೌಡ, ಡಿಎಸ್. ಮಂಜುನಾಥ್, ಮನೋಜ್, ಮುನಿರಾಜು, ಶಿವ ರಾಜು, ಮಧನ್, ಕೇಶವ, ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.