ಬೆಂಗಳೂರು: ಬಶವೇಶ್ವರನಗರದ ಹೆಣ್ಣು ಮಕ್ಕಳ ವಿಕಸನಾಲಯದಲ್ಲಿ ಹನ್ನೊಂದನೇ ಮಕ್ಕಳ ಹಬ್ಬದ ಅಂಗವಾಗಿ ವಿಶೇಷ ಚೇತನ ಪ್ರತಿಭೆ ಆರ್ ಸುದೀಂದ್ರ ಅವರು ಹನ್ನೊಂದು ಸಂಗೀತ ಪರಿಕರಗಳನ್ನು ನುಡಿಸುವ ಮುಖೇನ ವಿಶೇಷವಾಗಿ ಆಶ್ರಮದ ಅಂಗಳದಲ್ಲೇ ಆಚರಿಸಲಾಯಿತು.
ಪ್ರತಿಯೊಂದು ಪರಿಕರಗಳ ಬಗ್ಗೆ ಆಶ್ರಮವಾಸಿ ಮಕ್ಕಳಿಗೆ ವಿವರವಾಗಿ ಪರಿಚಯಿಸುವ ಜತೆಗೆ ಜಾನಪದ, ಭಾವಗೀತೆ, ಭಕ್ತಿಗೀತೆ, ಪರಿಸರಗೀತೆ, ಪಾಸ್ಚಾತ್ಯ ಗೀತೆಗಳು ಮತ್ತು ಹೆಸರಾಂತ ಚಲನ ಚಿತ್ರ ಗೀತೆಗಳನ್ನು ನುಡಿಸಿ ಮಕ್ಕಳನ್ನು ರಂಜಿಸಿದರು.ಮಕ್ಕಳು ಮತ್ತು ವಿಶೇಷ ಚೇತನ ಪ್ರತಿಭೆ ಸುದೀಂದ್ರ ನಡುವೆ ವಿಜ್ಞಾನ, ಪರಿಸರ, ಸಮಾಜ ಮತ್ತು ಸಂಗೀತ ಹೀಗೆ ಕೆಲವು ಕೌತುಕಗಳ ಬಗ್ಗೆ ಸಂವಾದ ಜತೆಗೆ ಕ್ವಿಜ್ ನಡೆಸಲಾಯಿತು.
ಮಕ್ಕಳ ಜತೆಗೆ ಮಕ್ಕಳಾದ ಅತಿಥಿಗಳು ಮಕ್ಕಳ ಜತೆ ಬೆರೆತು ಕಲೆತು. ಮಕ್ಕಳ ಜತೆ ಸಮೂಹಿಕ ವಿಶೇಷ ಭೋಜನ ಸವಿದರು. ಸಮಾರಂಭವನ್ನು ಹಿಂದೂಸ್ಥಾನಿ ಗಾಯಕರಾದ ಸುನೀತ ಗಂಗಾವತಿ ಉಧ್ಘಾಟಿಸಿ, ಸಮಸ್ತ ಆಶ್ರಮ ವಾಸಿ ಮಕ್ಕಳಿಗೆ ಮಕ್ಕಳ ಹಬ್ಬದ ಶುಭಕೋರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಸುಖಾಂಕ್ಷ ಚರಿಟಬಲ್ ಟ್ರಸ್ಟ್ ( ರಿ ) ಸಂಸ್ಥಾಪಕ ಅಧ್ಯಕ್ಕೆ ಜಿ. ಯಶೋಧ ವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಕೋಆರ್ಡಿನೇಟರ್ ಅಕ್ಷತ ಸಮಾರಂಭವನ್ನು ನಿರ್ವಹಿಸಿದರು. ವಾರ್ಡನ್ ಅನೀತ ಸ್ವಾಗತಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜ್ಞಾನೇಂದ್ರ , ಸಂತೆಷ್. ವಾಲೆಂಟೀಯರ್ ಸೌಜನ್ಯ , ಆಶ್ರಮವಾಸಿ 45 ಮಕ್ಕಳು ಸಮಾರಂಭವನ್ನು ಸಾಕ್ಷೀಕರಾಸಿದರು.