ಬೆಂಗಳೂರು: ಪರಿಸ್ಥಿತಿ ನೋಡಿ ತನ್ನ ಮನೆಯಲ್ಲೇ ಆಶ್ರಯ ಕೊಟ್ಟ ಜೀವದ ಗೆಳೆಯ ಜೀವ ತೆಗೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಭೋವಿಪಾಳ್ಯದಲ್ಲಿ ನಡೆದಿದೆ. ತಿಮ್ಮಭೋವಿಪಾಳ್ಯದಲ್ಲಿ ಸ್ವಂತ ಮನೆಯಲ್ಲಿ ಪ್ರದೀಪ್ ವಾಸವಿದ್ದ. ಕಳೆದ ಮೂರ್ನಾಲ್ಕು ತಿಂಗಳಿಂದ ಚೇತನ್ಗೆ ಆಶ್ರಯ ನೀಡಿದ್ದ. ಆದ್ರೆ, ಮೊನ್ನೆ ಶುಕ್ರವಾರ ಪಾಪಿ ಚೇತನ್ಗೆ ಅದೇನಾಯ್ತೋ ಏನೋ, ಆಶ್ರಯ ಕೊಟ್ಟಿದ್ದ ಪ್ರದೀಪ್ಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ. ಪ್ರದೀಪ್ ಕಿರುಚಾಡುವ ಶಬ್ದ ಕೇಳಬಾರದು ಎಂದು ಜೋರಾಗಿ ಟಿವಿ ಸೌಂಡ್ ಇಟ್ಟು, ಕತೆ ಮುಗಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ, ಮಾದನಾಯಕನಹಳ್ಳಿ ಪೊಲೀಸರು ಟವರ್ ಲೋಕೇಷನ್ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಪ್ರದೀಪ್ನನ್ನು ಸಲಿಂಗ ಕಾಮಕ್ಕೂ ಬಳಸಿಕೊಳ್ಳುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಮನೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆಂದು ಆರೋಪಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.