ಪರ್ತ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಅತ್ಯಂತ ಹೀನಾಯವಾಗಿ ಸೋಲಿಸಿತ್ತು. ವೇಗದ ಮತ್ತು ಬೌನ್ಸಿ ಪಿಚ್ನಲ್ಲಿ ಕಾಂಗರೂ ತಂಡ ಭಾರತದ ಆಟಗಾರರಿಗೆ ಶರಣಾಯಿತು. ಆಸ್ಟ್ರೇಲಿಯ ಎಂದಿಗೂ ಸೋಲನುಭವಿಸದ ನೆಲದಲ್ಲಿ 295 ರನ್ಗಳ ಹೀನಾಯ ಸೋಲು ಕಂಡಿರುವುದು ಪ್ಯಾಟ್ ಕಮಿನ್ಸ್ ತಂಡ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರರಿಗೆ ಆಘಾತ ನೀಡಿದೆ.
ಏತನ್ಮಧ್ಯೆ, ಜೋಶ್ ಹೇಜಲ್ವುಡ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೇಳಿಕೆಯೊಂದಿಗೆ ಹೊಸ ಬಾಂಬ್ ಸಿಡಿಸುವ ಮೂಲಕ ಆಸೀಸ್ ತಂಡದೊಳಗೆ ಬಿರುಕು ಮೂಡಿದೆ ಎಂಬ ಸಂದೇಹ ಹುಟ್ಟುಹಾಕಿದ್ದರು. ಆ ನಂತರ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್ಕ್ರಿಸ್ಟ್ ಕೂಡ ತಂಡದಲ್ಲಿ ಒಡಕು ಉಂಟಾಗಿದೆ ಎಂದು ಹೇಳುವ ಮೂಲಕ ಹೇಜಲ್ವುಡ್ ಹೇಳಿಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಇದೀಗ ಟ್ರಾವಿಸ್ ಹೆಡ್ ಈ ಹೇಳಿಕೆಯ ಬಗ್ಗೆ ಮೌನ ಮುರಿದಿದ್ದಾರೆ.