ಚಂದಾಪುರ: ಇತ್ತೀಚಿನ ದಿನಗಳಲ್ಲಿ ಜನರಿಗೆ ಆಸೆಗಿಂತ ದುರಾಸೆ ಜಾಸ್ತಿ ಆಗಿರುವುದರಿಂದ ಸಮಾಜ ತುಂಬಾ ಕಲುಷಿತವಾಗಿದೆ ಎಂಬುದಾಗಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಅವರು ಬೊಮ್ಮಸಂದ್ರ ಜಿಗಣಿ ಕೈಗಾರಿಕಾ ಪ್ರದೇಶದ ಸನ್ ಸೇರಾ ಕಾರ್ಮಿಕ ಬಳಗ ಘಟಕ 01, 03, 07 & 09 ರ ಸಹಯೋಗದಲ್ಲಿ ಏರ್ಪಡಿಸಿದ್ದ 69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಹಾಗೂ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯುವ ಶಕ್ತಿಯ ಮೇಲೆ ಭರವಸೆ ಇದೆ: ತಾವು ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಸಂಪಾದಿಸಿದ್ದರಲ್ಲಿ ಜೀವನ ನಡೆಸಿದರೆ ಸಮಾಜಕ್ಕೆಮಾದರಿ ಆಗುತ್ತದೆ, ಅಕ್ರಮ ಸಂಪಾದನೆ ಕಾನೂನುಬಾಹಿರವಾಗಿದೆ ಇಂತಹ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಕಾಪಾಡಲು ಯುವಜನತೆ ಪ್ರಾಮಾಣಿಕರಾಗಿ ನಿಷ್ಠಾವಂತರಾಗಿ ದುಡಿಮೆ ಮಾಡಿದರೆ ಹಾಗೂ ಸನ್ಮಾರ್ಗದಲ್ಲಿ ನಡೆದರೆ ಸಮಾಜ ತುಂಬಾ ಚೆನ್ನಾಗಿ ಇರುತ್ತದೆ ಈ ನಿಟ್ಟಿನಲ್ಲಿ ಯುವಶಕ್ತಿಯ ಮೇಲೆ ನಾವು ಇನ್ನೂ ಭರವಸೆಯನ್ನು ಇಟ್ಟುಕೊಂಡಿದ್ದಿವಿ ಎಂಬ ವಿಚಾರಗಳನ್ನು ಕಾರ್ಮಿಕ ಸಮೂಹಕ್ಕೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶರಾದ ಎಫ್.ಆರ್. ಸಿಂಘ್ವಿ ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಅನೇಕ ರೀತಿಯ ಸಾಮಾಜಿಕ ಕಾರ್ಯಗಳು ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರಿ ಶಾಲೆಗಳನ್ನ ದತ್ತು ಪಡೆದುಕೊಳ್ಳುವುದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಧನ ಸಹಾಯವನ್ನು ಮಾಡೋದು, ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ ಕಾರಣ ಶೈಕ್ಷಣಿಕ ಪ್ರಗತಿಯಿಂದ ಸದೃಢ ಭಾರತ ಕಟ್ಟುವ ಸಂಕಲ್ಪದ ಆಶಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಕನ್ನಡ ಪಠ್ಯದಲ್ಲಿ 90% ಗಿಂತ ಹೆಚ್ಚು ಅಂಕ ಪಡೆದ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಥೆಯಲ್ಲಿ 30 ವರ್ಷಗಳ ಸುದೀರ್ಘಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಸೇವಾ ಪುರಸ್ಕಾರ ಗೌರವವನ್ನು ಮಾಡಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಟಿ.ಪಿ.ಮಧುಸೂದನ್, ದೇವಯ್ಯ, ಗುರಪ್ಪ ನಾಯ್ಡು, ಮನೋಹರ್, ವಿಜಯೇಂದ್ರ, ತ್ರಿವರ್ಮ,
ಕವಿ ಹಾಗೂ ಪತ್ರಕರ್ತ ಜೇನುಗೂಡು ಮಹೇಶ್ ಊಗಿನಹಳ್ಳಿ, ಕಾರ್ಮಿಕ ಮುಖಂಡರುಗಳಾದ ಮಲ್ಲಿಕಾರ್ಜುನ. ಎಸ್. ವಿ, ರವೀಂದ್ರ, ಕುಪೇಂದ್ರ, ವಿಶ್ವನಾಥ್, ಚನ್ನಪ್ಪ, ಸುದರ್ಶನ್, ಹರೀಶ್, ಶಿವಕುಮಾರ್, ರಾಮಕೃಷ್ಣ, ಮಾದಪ್ಪನ್, ಮಂಜುನಾಥ್, ಮಾಯಾಚಾರಿ, ಹನುಮಂತ, ಮಂಜುನಾಥ್, ವಿನಯ್, ಸುನಿಲ್, ಇನ್ನೂ ಮುಂತಾದವರು ಹಾಜರಿದ್ದರು.