ಐದು ಟೆಸ್ಟ್ ಸರಣಿಯ ಪ್ರತಿಷ್ಠಿತ ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನವನ್ನು ನೀಡಿ 1 -3 ಅಂತರದಿಂದ ಸೋತು, ತವರಿಗೆ ವಾಪಸ್ ಆಗಿತ್ತು. ಸರಣಿಯ ನಂತರ, ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುತ್ತಾರೆ ಎಂದು ಸುದ್ದಿಯಾಗಿತ್ತು.
ಸಿಡ್ನಿಯಲ್ಲಿ ನಡೆದ ನ್ಯೂ ಈಯರ್ ಟೆಸ್ಟಿಗೆ ರೋಹಿತ್ ಶರ್ಮಾ, ಫಿಟ್ನೆಸ್ ಹೆಸರಿನಲ್ಲಿ ತಂಡದಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯಾದಲ್ಲಿ ಭಾರತದ ಆಟಕ್ಕೆ ವೀಕ್ಷಕ ವಿವರಣೆಗಾರರಾಗಿದ್ದ ಸುನೀಲ್ ಗವಾಸ್ಕಾರ್ ಮತ್ತು ರವಿ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಆಸ್ಟ್ರೇಲಿಯಾ ಪ್ರವಾಸದ ನಂತರ ಹೆಡ್ ಕೋಚ್ ಗೌತಂ ಗಂಭೀರ್, ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ನಾಯಕ ರೋಹಿತ್ ಶರ್ಮಾ ಸೇರಿದಂತೆ, ಬಿಸಿಸಿಐ ಅಧಿಕಾರಿಗಳು ಪರಾಮರ್ಶೆ ಸಭೆಯನ್ನು ನಡೆಸಿದ್ದರು. ಆ ವೇಳೆ, ರೋಹಿತ್ ಶರ್ಮಾ, ಮಾಜಿ ನಾಯಕ ಗವಾಸ್ಕರ್ ವಿರುದ್ದ ದೂರನ್ನು ನೀಡಿದ್ದಾರೆಂದು ವರದಿಯಾಗಿದೆ.