ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಸರಣಿ ಸೋಲಿನ ಬಳಿಕ ಇದೀಗ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಚ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಂದು ಪರ್ತ್ ನಲ್ಲಿ ಪ್ರಾರಂಭ ಆಗಲಿದೆ.
ತಂಡದ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಏತನ್ಮಧ್ಯೆ ಭಾರತಕ್ಕೆ ಮತ್ತೊಂದು ಹೊಡೆತವೆಂದರೆ 3ನೇ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಅವರು ಹೆಬ್ಬೆರಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಪಂದ್ಯದಲ್ಲಿ ಆಡುತ್ತಿಲ್ಲ.
ಹೀಗಾಗಿ ಭಾರತಕ್ಕೆ ಇದೀಗ ಆರಂಭಿಕ ಮತ್ತು 3ನೇ ಕ್ರಮಾಂಕದ ಬ್ಯಾಟರ್ ಇಬ್ಬರನ್ನೂ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರೋಹಿತ್ ಶರ್ಮಾ ಅವರಿಗೆ ಗಂಡು ಮಗುವಿನ ಜನನ ಆಗಿರುವುದರಿಂದ ಅವರು ಮುಂಬೈನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. 5 ಟೆಸ್ಟ್ ಪಂದ್ಯಗಳ ಸರಣಿಗೆ ಅವರು ಯಾವಾಗ ಲಭ್ಯರಾಗುತ್ತಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಮೊದಲನೇ ಟೆಸ್ಟ್ ಗೆ ಲಭ್ಯರಿಲ್ಲ ಎಂಬುದು ಖಚಿತವಾಗಿದೆ.
ರೋಹಿತ್ ಬದಲಿಗೆ ಅಭಿಮನ್ಯುಈ ಮೊದಲು ರೋಹಿತ್ ಅವರು ಲಭ್ಯರಿಲ್ಲ ಎಂಬ ಕಾರಣಕ್ಕೆ ಅನುಭವೀ ಆಟಗಾರ ಕೆಎಲ್ ರಾಹುಲ್ ಅವರನ್ನು ಆರಂಭಿಕನಾಗ ಕಳಿಸುವ ಚಿಂತನೆ ಇತ್ತು. ಆದರೆ ಇದೀಗ ಗಿಲ್ ಅವರೂ ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಸಾಧ್ಯತೆಗಳಿವೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಅರ ಜೊ ತೆಗೆ ಅಭಿಮನ್ಯು ಈಶ್ವರನ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಗೊಂದು ವೇಳೆ ಹಾಗಾದರೆ ಅಭಿಮನ್ಯು ಈಶ್ವರನ್ ಅವರಿಗೆ ಇದು ಪ್ರಥಮ ಪಂದ್ಯವಾಗಲಿದೆ.
ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಲಿದ್ದಾರೆ. ಬಹಳ ಸಮಯದಿಂದ ಅವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬಂದಿಲ್ಲ. ಹೀಗಾಗಿ ಅವರು ಲಯಕ್ಕೆ ಮರಳಲು ಈ ಸರಣಿ ಉತ್ತಮ ಅವಕಾಶವಾಗಿದೆ.