ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ ಮತ್ತು ಮಲತಾಯಿಯನ್ನ ಕೊಚ್ಚಿ ಪುತ್ರ ಕೊಲೆಗೈದಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ತಂದೆ ಅಶೋಕಪ್ಪ, ಮಲತಾಯಿ ಶಾರದಮ್ಮರನ್ನ ಪುತ್ರ ಗಂಗಾಧರಪ್ಪ ಕೊಂದು ಪರಾರಿ ಆಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗಂಗಾಧರಪ್ಪ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
2 ಎಕರೆ ಜಮೀನನ್ನು ತನ್ನ ಹೆಸರಿಗೆ ಬರೆದುಕೊಡು ಎಂದು ಪುತ್ರ ಪೀಡಿಸುತ್ತಿದ್ದ. ಈ ವಿಚಾರವಾಗಿ ಅಪ್ಪ, ಮಗನ ನಡುವೆ ಜಗಳವಾಗಿದೆ. ಕುಡಿದು ಬಂದು ಇಂದು ಸಹ ಗಲಾಟೆ ಮಾಡಿದ್ದಾರೆ. ಈ ವೇಳೆ ಆಸ್ತಿ ಬರೆದುಕೊಡಲು ನಿರಾಕರಿಸಿದ್ದಕ್ಕೆ ಕೊಚ್ಚಿ ಕೊಲೆಗೈದ್ದಾರೆ.
ಘಟನೆ ನಂತರ ಮನೆ ಬಳಿ ನೂರಾರು ಜನ ಜಮಾವಣೆಯಾಗಿದ್ದರು. ಗಂಗಾಧರಪ್ಪನ ವಿರುದ್ಧ ಕುಸುಗಲ್ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಮಕ್ಕಳು ಯಾರಿಗೂ ಬೇಡ, ಸುಟ್ಟುಹಾಕಬೇಕೆಂದು ಆಗ್ರಹಿಸಿದ್ದಾರೆ. ದುಷ್ಕೃತ್ಯವನ್ನು ನೋಡಿದರೆ ಗಂಡುಮಕ್ಕಳೇ ಬೇಡವೆಂದು ಅನಿಸುತ್ತೆ. ಆರೋಪಿ ಗಂಗಾಧರಪ್ಪನನ್ನು ಸುಟ್ಟುಹಾಕಿ ಎಂದು ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಹಿಳೆಯರು ಒತ್ತಾಯಿಸಿದ್ದಾರೆ.