ಉತ್ತರ ಪ್ರದೇಶದ ಮೀರತ್ನ ಶಾಸ್ತ್ರಿ ನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹಾಪುರ್ ಚುಂಗಿಯಲ್ಲಿರುವ ಕ್ಯಾಪಿಟಲ್ ಆಸ್ಪತ್ರೆಯ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ ತಾಯಿ ಮೃತಪಟ್ಟಿದ್ದಾರೆ.
ಲಿಫ್ಟ್ನಲ್ಲಿ ಬಾಣಂತಿ ಮಹಿಳೆ ಸೇರಿದಂತೆ ಮೂವರು ಹೋಗುತ್ತಿದ್ದರು. ಮಹಿಳೆಗೆ ಹೆರಿಗೆ ಮಾಡಲಾಗಿತ್ತು. ಹೀಗಾಗಿ ಅವರನ್ನು ನೆಲಮಹಡಿಗೆ ಕರೆದೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮಹಿಳೆಯ ಕುತ್ತಿಗೆ ಲಿಫ್ಟ್ಗೆ ಸಿಲುಕಿ ಸಾವನ್ನಪ್ಪಿದ್ದಾಳೆ. ಉಳಿದ ಮೂವರಿಗೂ ಗಾಯಗಳಾಗಿವೆ. ಅಪಘಾತದ ನಂತರ, ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಸಮಾಧಾನಪಡಿಸಿದರು.
ಗರ್ಭಿಣಿಯನ್ನು ಲಿಫ್ಟ್ ಮೂಲಕ ಕೆಳಗೆ ಇಳಿಸಲಾಯಿತು. ಆತನೊಂದಿಗೆ ಇತರ ರೋಗಿಗಳು ಮತ್ತು ಪರಿಚಾರಕರು ಇದ್ದರು. ನೆಲಮಹಡಿಯನ್ನು ತಲುಪುವ ಮೊದಲು ಲಿಫ್ಟ್ ಮುರಿದು ಬಿದ್ದಿದೆ. ಈ ವೇಳೆ ಲಿಫ್ಟ್ ಕೆಳಗೆ ಬಾಣಂತಿಯ ಕುತ್ತಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಯಾಪಿಟಲ್ ಹಾಸ್ಪಿಟಲ್ ಮೀರತ್ನ ಪ್ರಸಿದ್ಧ ಆಸ್ಪತ್ರೆಯಾಗಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಮಹಿಳೆಯ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಟ್ಟಿಗೆದ್ದ ಕುಟುಂಬಸ್ಥರು ಆಸ್ಪತ್ರೆಯ ಗಾಜು ಹಾಗೂ ಪಿಠೋಪಕರಣಗಳನ್ನು ಒಡೆದಿದ್ದಾರೆ. ಇಡೀ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿವಿಲ್ ಲೈನ್ ಸಿಒ ಅಭಿಷೇಕ್ ತಿವಾರಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಲಿಫ್ಟ್ ಅಸಮರ್ಪಕವಾಗಿರುವ ಸಾಧ್ಯತೆ ಇದೆ. ಸದ್ಯ ಆಸ್ಪತ್ರೆ ಆಡಳಿತ ಮಂಡಳಿ ಎಲ್ಲ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದೆ.