ದೇವನಹಳ್ಳಿ: ಬಾಲಕನಿದ್ದಾಗಲೇ ಅಸಮಾನತೆಯ ಜಾತಿ ತಾರತಮ್ಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದವರಾಗಿ ವಿದ್ಯಾರ್ಥಿ ಜೀವನದಲ್ಲಿ ಸಮಾಜದ ಅಂಕುಡೊಂಕುಗಳ ಬಗ್ಗೆ ಚಿಂತಿಸಿ ಪ್ರತಿಭಟಿಸುವ ದಲಿತ ಚಳುವಳಿಯಲ್ಲಿ ಸೇರ್ಪಡೆಗೊಂಡಿದವರು ದೇವನಹಳ್ಳಿಯ ಗ್ರಾಮ ಗ್ರಾಮಗಳಲ್ಲಿ ನಡೆದಿದ್ದ ಅಸ್ಪೃಶ್ಯತೆ ದೌರ್ಜನ್ಯಗಳ ವಿರುದ್ಧ ದಶಗಳ ದಶಕಗಳ ಕಾಲ ಸಿಡಿದಿದ್ದವರು.
ನಾಡಿನ ದಲಿತ ಚಳುವಳಿ ಗುಡಿಯಾಗಿ ಮೂಡಿಬಂದು ಎಲ್ಲಾ ಜಾತಿ ಜನ ವರ್ಗಗಳಲ್ಲಿ ಸೌಹಾರ್ದತೆಯ ಬಂದು ಮೂಡಿಸಿ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ರವರ ಮಹಾ ಸಂದೇಶವಾದ ಸಮಾಜದ ಋಣ ತೀರಿಸಿ ಎಂಬ ವಿಚಾರಕ್ಕೆ ಬದ್ಧರಾಗಿ ತಮ್ಮ 62 ವರ್ಷಗಳ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸು ತ್ತ ಬಂದವರಾಗಿದ್ದು ಇಂತಹ ಪುಣ್ಯ ಆತ್ಮಕೊಂದು ಶ್ರದ್ಧಾಂಜಲಿ ಸಮರ್ಪಿಸುವುದು ನಮ್ಮ ನಿಮ್ಮೆಲ್ಲರ ಸಮಂಜಸ ಕಾರ್ಯವೆಂದು ಭಾವಿಸಿ ಸರ್ವರಿಗೂ ಸ್ವಾಗತ ಬಯಸುತಿದ್ದೇವೆ ಎಂದು ಸಮತಾ ಸೈನಿಕದಳ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಗಸ್ಟ್ 11 ಭಾನುವಾರದಂದು ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ಭವನದಲ್ಲಿ ಸಮತಾ ಸೈನಿಕದಳದ , ಸಂವಿಧಾನ ಬಳಗ ಮತ್ತು ಸಿ.ಎಂ ಹಿತೈಷಿಗಳ ಬಂಧು ಬಳಗದ ಜಂಟಿ ಆಶ್ರಯದಲ್ಲಿ ಸಿ. ಮುನಿಯಪ್ಪ ಅವರ ಶ್ರದ್ಧಾಂಜಲಿ ಸಭೆಯ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದರು.
ದಲಿತ ಸಂಘರ್ಷ ಸಮಿತಿ ಭೀಮಶಕ್ತಿಯ ರಾಜ್ಯ ಸಹಕಾರ್ಯದರ್ಶಿ ದಾಸರಬೀದಿ ಮುರಳಿ ಮಾತಾನಾಡಿ ಎಲ್ಲಾ ದಲಿತಪರ, ಕಾರ್ಮಿಕಪರ ಜನಪರ ಒಡನಾಡಿಯಾಗಿ ಪರಿಚಿತರಾಗಿದ್ದರು, ತಾವೇ ಸಂಸ್ಥಾಪಿಸಿದ ಭಾರತ ಜನ ಜಾಗೃತಿಸೇನೆ ಸಂಘದ ರಾಜ್ಯಾಧ್ಯಕ್ಷರಾಗಿ ನಾಡಿನಾದ್ಯಂತ ನಡೆದ ನೂರಾರು ಹೋರಾಟಗಳಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ನಿಸ್ವಾರ್ಥರಾಗಿ ತೊಡಗಿಸಿಕೊಂಡವರಾಗಿದ್ದು, ಪತ್ರಕರ್ತರ ಸಂಘದ ಪದಾಧಿಕಾರಿಯಾಗಿಯೂ ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ನಿರಂತರವಾಗಿ ದುಡಿದಿದ್ದರು,
ಸರ್ಕಾರಿ ನೌಕರಿಯಲ್ಲಿದ್ದರೂ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ನಿರಂತರವಾಒಡನಾಟ ಹೊಂದಿದ್ದರು ದೇವನಹಳ್ಳಿ ತಾಲೂಕಿನ ಪ್ರಶ್ನೋತ್ತರ ಸಮಾಜ ಸೇವಕ ಎಂದೇ ಹೆಸರುಗಳಿಸಿದ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ನೆಡಯಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯ
ದರ್ಶಿ ಜೆ.ಸಿ.ವೆಂಕಟರಮಣಪ್ಪ, ರಾಜ್ಯ ಸಮಿತಿ ಸದಸ್ಯರು ಅಂಬರೀಷ, ದಲಿತ ಸಂಘರ್ಷ ಸಮಿತಿ ಭೀಮಶಕ್ತಿಯ ಜಿಲ್ಲಾಧ್ಯಕ್ಷೆ ನಾಗವೇಣಿ ಮತ್ತಿತರರು ಇದ್ದರು.