ಅನಂತಪುರ: ಅನಿರೀಕ್ಷಿತ ಫಲಿತಾಂಶವನ್ನು ದಾಖಲಿಸಿದ ಮಾಯಾಂಕ್ ಅಗರ್ವಾಲ್ ನೇತೃತ್ವದ ಇಂಡಿಯಾ ಎ ತಂಡ 2024ನೇ ಸಾಲಿನ ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಮೂಡಿಬಂದಿದೆ. ಅದು 3ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಸಿ ತಂಡವನ್ನು 132 ರನ್ನುಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.
ಇಂಡಿಯಾ ಎ ಕೇವಲ 6 ಅಂಕಗಳೊಂದಿಗೆ ಅಂತಿಮ ಸುತ್ತಿನ ಪಂದ್ಯವನ್ನು ಆಡಲಿಳಿದಿತ್ತು. ಇಂಡಿಯಾ ಸಿ 9 ಅಂಕ ಹೊಂದಿತ್ತು. ಆದರೆ 350 ರನ್ ಚೇಸಿಂಗ್ ಹಾದಿಯಲ್ಲಿ ಋತುರಾಜ್ ಗಾಯಕ್ವಾಡ್ ಪಡೆ 217ಕ್ಕೆ ಆಲೌಟ್ ಆದ ಪರಿಣಾಮ ಪ್ರಶಸ್ತಿಯಿಂದ ವಂಚಿತವಾಗಬೇಕಾಯಿತು. ಪಂದ್ಯ ವನ್ನು ಡ್ರಾ ಮಾಡಿಕೊಂಡಿದ್ದರೂ ಇಂಡಿಯಾ ಸಿ ಚಾಂಪಿಯನ್ ಆಗುತ್ತಿತ್ತು.