ಪೀಣ್ಯ ದಾಸರಹಳ್ಳಿ: ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಆಯೋಜಿಸಲಿಗಿದ್ಧ ದಾಖಲೆಯ ಕವಿಗಳಿಂದ ಕವನ ವಾಚನ ಮತ್ತು ಸಮ್ಮೇಳನದಲ್ಲಿ 323 ಕವಿಗಳು ವಾಚನ ಮಾಡಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆ ನಿರ್ಮಿಸಲಾಗಿದೆ ಹೆಸರಘಟ್ಟ ಮುಖ್ಯ ರಸ್ತೆಯ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯು ಗುರು ಹರೀಶ್ ಆರ್ ಕವಿಗೋಷ್ಠಿಯಲ್ಲಿ 323 ಕವಿಗಳು ವಾಚನ ಮಾಡಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆ ನಿರ್ಮಿಸಲಾಗಿದೆ ಎಂದು ಘೋಷಿಸಿದರು ಈ.ವೇಳೆ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷರಾದ ವೈ ಬಿ ಹೆಚ್ ಜಯದೇವ್ ಪ್ರಯೋಗ ಶೀಲ ಕವಿ ತನ್ನ ಸುತ್ತಣ ವ್ಯವಹಾರಗಳಿಗೆ ಸ್ಪಂದಿಸಿದಾಗ ಮಾತ್ರ ಶ್ರೇಷ್ಠ ಕಾವ್ಯ ಸೃಷ್ಟಿಸಲು ಸಾಧ್ಯ’ ತಿಳಿಸಿದರು.
ಇಂದಿನ ಆಧುನಿಕರಣ, ಖಾಸಗೀಕರಣ, ಪಾಶ್ಚಿಮಾತ್ಯೀಕರಣ ದಿನಮಾನಗಳಲ್ಲಿ ಬದಲಾಗುತ್ತಿರುವ ಬದುಕಿನ ವೇಗಕ್ಕೆ ಸಮನಾಗಿ ಕವಿ ಒಗ್ಗೂಡಿಸಿಕೊಳ್ಳಬೇಕಿದೆ’’ ಎಂದು ತಿಳಿಸಿದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಹರೀಶ್ ಆರ್ ಮಾತನಾಡಿ’ ಎಲ್ಲೋ ನಾವು ಕವಿಗಳು ಇದ್ದೀವಿ ಎನ್ನುವುದಕ್ಕೆ ದಾಖಲೆ ಮಾಡುವುದೇ ನಮ್ಮ ಉದ್ದೇಶ. ಈ ಕವಿಗೋಷ್ಠಿಯಲ್ಲಿ 323 ಕವಿಗಳು ವಾಚನ ಮಾಡಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆ ನಿರ್ಮಿಸಲಾಗಿದೆ’ ಎಂದು ಘೋಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ’ ಸಮಾಜವನ್ನು ತಿದ್ದುವ ಜವಾಬ್ದಾರಿ ಕವಿಗಳ ಮೇಲಿದೆ. ಕನ್ನಡಿಗರಾದ ನಾವು ಕನ್ನಡವನ್ನು ಎತ್ತಿ ಹಿಡಿಯಬೇಕು. ಬರೀ ಕನ್ನಡದಿಂದಲೇ ವಿಶ್ವ ಮಾನ್ಯರಾದವರು ಅನೇಕರಿದ್ದಾರೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ನಮ್ಮಲ್ಲಿ ಶ್ರೀಮಂತವಾಗಿದೆ’ ಎಂದರು.ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ ಅಕ್ಕರ ಸಭೆಯನ್ನು ಉದ್ದೇಶಿಸಿ ಸಂಸ್ಥೆಯ ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದರುಭೂಮಿಕಾ ಸೇವಾ ಫೌಂಡೇಶನ್ ಸಂಸ್ಥೆಯವರಿಂದ ಕುಂಭ ಕಳಶ ಹೊತ್ತ ಮಹಿಳೆಯರು ಯಾದಗಿರಿಯ ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ, ಸಮ್ಮೇಳನದ ಅಧ್ಯಕ್ಷ ವೈ.ಬಿ.ಎಚ್ ಜಯದೇವ್ ಮತ್ತು ಗಣ್ಯರನ್ನು ವೇದಿಕೆಗೆ ಕರೆತಂದರು.
ವೇದಿಕೆಯ ಕಾರ್ಯಕ್ರಮದಲ್ಲಿ ಆಶೀರ್ವಚನ, ಭಾಷಣ ಮತ್ತು ಕವಿಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸಂಸ್ಥೆಯ ಅಧ್ಯಕ್ಷ ಈ. ರವೀಶ, ಸಂಸ್ಥೆಯ ಖಜಾಂಚಿ ಸವಿತ ಬಿ ಟಿ , ಅಸೆಂಟ್ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ವೆಂಕಟೇಶ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಹರೀಶ್ ಆರ್, ನಿವೃತ್ತ ಪ್ರಾಂಶುಪಾಲ ಜಿ.ಎಸ್. ಮಲ್ಲಿಕಾರ್ಜುನಪ್ಪ, ಕವಿತಾ ರಾಜೇಂದ್ರ ಕೊಣ್ಣೂರ ಮತ್ತು ಕವಿಗಳು ಶೈಲಜಾ ಬಾಬು ಇದ್ದರು.