ಪ್ಯಾರಿಸ್: ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ 100 ಗ್ರಾಂ ಹೆಚ್ಚುವರಿ ತೂಕದ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಮಂಡಳಿಗೆ ಸಲ್ಲಿಸಿರುವ ಮೇಲ್ಮನವಿಯತೀರ್ಪು (ಇಂದು) ಮಂಗಳವಾರ ಹೊರಳಬೀಳಲಿದೆ.
ಅನರ್ಹ ಮಾಡಿದ್ದ ಬಗ್ಗೆ ಪ್ರಶ್ನಿಸಿ ವಿನೇಶ್ ಅವರು ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಒಲಿಂಪಿಕ್ಸ್ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿ ಒಲಿಂಪಿಕ್ಸ್ ಮುಕ್ತಾಯಕ್ಕೂ ಮುನ್ನ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ 2 ಬಾರಿ ಈ ತೀರ್ಪು ಪ್ರಕಟ ಮುಂದೂಡಿಕೆಯಾಗಿತ್ತು.
ಇದೀಗ ಇಂದು (ಆಗಸ್ಟ್ 13) ಅಧಿಕೃತವಾಗಿ ತೀರ್ಪು ಪ್ರಕಟಿಸುವುದಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತಿಳಿಸಿದೆ. ರಾತ್ರಿ 9:30ಕ್ಕೆ ಈ ತೀರ್ಪು ಪ್ರಕಟಗೊಳ್ಳಲಿದೆ. ಒಂದೊಮ್ಮೆ ವಿನೇಶ್ಗೆ ಬೆಳ್ಳಿ ಪದಕ ನೀಡುವಂತೆ ತೀರ್ಪು ಪ್ರಕಟಗೊಂಡರೆ ಭಾರತದ ಪದಕ ಸಂಖ್ಯೆ 7ಕ್ಕೆ ಏರಲಿದೆ. ಜತೆಗೆ ವಿನೇಶ್ ಐತಿಹಾಸಿಕ ಪದಕ ಗೆದ್ದ ಭಾರತೀಯ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ.