ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗೆಂದು ಅಮೇರಿಕಾಗೆ ಹೋಗಿದ್ದು, ಇಂದು ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಅಗ್ರಹಾರ ದಾಸರಹಳ್ಳಿ ವೀರೇಶ್ ಚಿತ್ರಮಂದಿರದ ಬಳಿಯಿರುವ ವರಪುತ್ರ ಡಾ. ಶಿವರಾಜಕುಮಾರ್, ಡಾ. ಪುನೀತ್ ರಾಜಕುಮಾರ್ ಕನ್ನಡ ಸೇನೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿಯ ವಿಘ್ನ ನಿವಾರಕ ವಿಘ್ನೇಶ್ವರ, ಸುಬ್ರಹ್ಮಣ್ಯ ಸ್ವಾಮಿ ಮತ್ತು ಮುತ್ತಾಂಜನೇಯ ಸ್ವಾಮಿ ದೇವಾಲಯದಲ್ಲಿಂದು ವಿಶೇಷ ಪೂಜೆ ನೆರವೇರಿಸಿದರು.ಮುತ್ತಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ನಟ ಶಿವಣ್ಣನ ಹೆಸರಿನಲ್ಲಿ ಆರ್ಚನೆ ಮಾಡಿಸಿದರು. ಈ ವೇಳೆ ಅಭಿಮಾನಿಗಳು ನಟ ಶಿವರಾಜಕುಮಾರ್ ಇಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದುಚಿಕಿತ್ಸೆ ಯಶಸ್ವಿಯಾಗಲಿ, ಚಿಕಿತ್ಸೆ ಮುಗಿಸಿ ಬೇಗ ಗುಣಮುಖರಾಗಿ ಕರ್ನಾಟಕಕ್ಕೆ ಬಂದು ಮತ್ತೆ ನಾಡಿನ ಜನರನ್ನು ರಂಜಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ನಂತರ ದೇವಾಲಯದ ಮುಂಭಾಗ ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಈಡುಗಾಯಿ ಒಡೆದರು.
ಈ ವೇಳೆ ವರಪುತ್ರ ಡಾ ಶಿವರಾಜಕುಮಾರ್, ಡಾ. ಪುನೀತ್ ರಾಜಕುಮಾರ್ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ಅವರು ಮಾತನಾಡಿ, ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಅಮೆರಿಕದಲ್ಲಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಕೋಟ್ಯಂತರ ಕನ್ನಡಿಗರು ರಾಜ್ಯಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆರೋಗ್ಯವಂತರಾಗಿ ಬೇಗ ಗುಣಮುಖರಾಗಲಿ ಎಂದು ಮುತ್ತಾಂಜನೇಯ ಸ್ವಾಮಿ, ಗಣೇಶ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಮತ್ತು ಡಾ. ರಾಜಕುಮಾರ್ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಅಪ್ಪು ಯುವ ಬ್ರಿಗೇಡ್ ಅಧ್ಯಕ್ಷರಾದ ಮುರಳಿರವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಗಿರೀಶ್, ಸಂಪತ್, ಶ್ರೀನಿವಾಸ್, ಆನಂದ್, ಮಂಜು, ಶಂಕರ್, ಗೋಪಿನಾಥ್, ಅಗ್ರಹಾರ ಮನು, ಸೋಮು, ಆನೇಕಲ್ ಮಂಜು, ವಿಜಯನಗರ ಕೆಂಚ, ಕಾಂಗ್ರೆಸ್ ಮುಖಂಡರಾದ ಯೋಗೀಶ್, ಮಂಜುನಾಥ್ ಹಾಗೂ ರಾಜವಂಶದ ಅಭಿಮಾನಿಗಳು. ಸ್ಥಳೀಯ ನಾಗರಿಕರು ಮತ್ತಿತರರು ಹಾಜರಿದ್ದರು.