ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಲ್ಲಿ ಸುಮಾರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಮಾಡಿ ಗುರುತಿಸಿಕೊಂಡಿದ್ದ ಎಂಟು ಜನ ಪತ್ರಕರ್ತರಿಗೆ ಈ ಬಾರಿ ಮಹಾನಗರ ಪಾಲಿಕೆಯ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ಪತ್ರಕರ್ತ ಮಿತ್ರರಿಗೆ ಸಂತಸದ ವಿಷಯವಾಗಿದೆ.
ಹಿರಿಯ ಪತ್ರಕರ್ತರಾದ ಜಹೀರಅಬ್ಬಾಸ್ ಮುಲ್ಲಾ, ಪ್ರಸನ್ನ ಕರ್ಪೂರ, ವಿನಾಯಕ ದೇಶಪಾಂಡೆ, ಗುರುರಾಜ ಹೂಗಾರ ಸುವರ್ಣ ನ್ಯೂಸ್, ಧಾರವಾಡದ ನರಸಿಂಹ ಪ್ಯಾಟಿ, ಆನಂದಕುಮಾರ ಅಂಗಡಿ, ಶಿವಶಂಕರ ಕಂಠಿ, ಮಿಲಿಂದ ಪಿಸೆ ಇಂದು ಸಂಜೆ ಪತ್ರಿಕೆಯ ಫೋಟೋಗ್ರಾಫರ್, ಶಿವಾಜಿ ಲಾತೋರಕರ. ಟಿವಿ ೯ ಕ್ಯಾಮೆರಾ ಮ್ಯಾನ್, ಈ ಪತ್ರಕರ್ತರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ಸಂಜೆ. ೫. ಗಂಟೆಗೆ ಇಂದಿರಾಗಾAಧಿ ಗಾಜಿನ ಮನೆಯಲ್ಲಿ ಧೀಮಂತ ಪ್ರಶಸ್ತಿ ನೀಡಿ ಗೌರವಿಸಲಿದೆ. ಇವರಿಗೆ ಇಂದು ಸಂಜೆ ಪತ್ರಿಕೆಯ ಬಳಗವು ಹಾರ್ದಿಕ ಅಭಿನಂದನೆ ಸಲ್ಲಿಸುತ್ತದೆ.