ಕೊಪ್ಪಳ: ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ದೈವಭಕ್ತ ಮತ್ತು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನಿಗೆ ನಡೆದುಕೊಳ್ಳುತ್ತಾರೆ. ರೆಡ್ಡಿ ಪ್ರತಿವರ್ಷ ಹನುಮ ಮಾಲೆ ಧರಿಸಿ ಹನುಮವ್ರತ ಕೈಗೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಹನುಮಮಾಲೆ ವಿಸರ್ಜನೆ ದಿನವಾಗಿರುವುದರಿಂದ ಅವರು ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರೆಡ್ಡಿ ಅವರೊಂದಿಗೆ ಹಲವಾರು ಹನುಮ ಭಕ್ತರು ಮತ್ತು ಹನುಮಮಾಲೆ ಧರಿಸಿರುವವರು ಬೆಟ್ಟದಲ್ಲಿ ಪೂಜೆ ಸಲ್ಲಿಸಿದರು.