ಬೆಂಗಳೂರು: ಕರ್ನಾಟಕ ಪ್ರತಿಭಾವರ್ಧಕ ಆಕಾಡೆಮಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಸಮಾರಂಭ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ನಿಡುಮಾಮಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿವರಾಜ್ ಪಾಟೀಲ್,ಬೇಲಿ ಮಠದ ಶಿವಾನುಭವ ಚರಮೂರ್ತಿ ಸ್ವಾಮೀಜಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ದಾಂಪತ್ಯ ಜೀವನದಲ್ಲಿ ಆರು ದಶಕಗಳನ್ನು ಪೂರೈಸಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ನಿಡುಮಾಮಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಮಾತನಾಡಿ, ಶಿವರಾಜ್ ಪಾಟೀಲ್ ದಂಪತಿಗಳು ಕವಿ ಕಾಳಿದಾಸ ಹೇಳುವ ವಾಖ್ಯಾನದಂತೆ ಬದುಕಿ ತೋರಿಸಿದವರು,ಪರಸ್ಪರ ಅವರ ದಾಂಪತ್ಯ ಜೀವನದಲ್ಲಿನ ಪ್ರೀತಿ, ಸಹಬಾಳ್ವೆಯಿಂದ ಉತ್ತಮ ಎತ್ತರ ಸ್ಥಾನಕ್ಕೆ ಏರಿದ್ದಾರೆ,ಅವರ ಸಾಧನೆ ಹಿಂದೆ ಪತ್ನಿಯ ತ್ಯಾಗವೂ ಕಾರಣವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾರದೇ ದಾಂಪತ್ಯ ಜೀವ ಯಶಸ್ವಿಯಾಗಬೇಕಾದರೆ ಪರಸ್ಪರ ಪ್ರೀತಿ, ಗೌರವ, ತಿಳುವಳಿಕೆ ಇರಬೇಕು,ಇತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ವಿರಸಗಳು ಜಾಸ್ತಿಯಾಗಿ ಡೈವೋರ್ಸ್ ಗಳು ಹೆಚ್ಚಾಗುತ್ತವೆ ಕಾರಣ ಪ್ರೀತಿ,ಪರಸ್ಪರ ಗೌರವ,ತಿಳುವಳಿಕೆಯ ಕೊರತೆಯೇ ಇದಕ್ಕೆ ಕಾರಣವಾಗಿದೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ದಂಪತಿಗಳು ಅನೂನ್ಯತೆಯಿಂದ ಬದುಕಬೇಕು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ,ಪ್ರತಿಭಾ ವರ್ಧಕ ಆಕಾಡೆಮಿಯಿಂದ ಆರವತ್ತು ವರ್ಷ ಸಾರ್ಥಕ ಬದುಕು ಪೂರೈಸಿದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸುವುದು ಪ್ರಶಂಸನೀಯ ಎಂದು ಹೇಳಿದರು.ಶರಣ ಸಾಹಿತ್ಯದ ಹಿರಿಯ ಐಎಎಸ್ ಅಧಿಕಾರಿ ಡಾ.ಸೋಮಶೇಖರ್,ಶಾಸ್ತ್ರೀಯ ಸ.ಗೀತದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ,ಸಂಗೀತ ಕಲಾ ಆಕಾಡೆಮಿ ಅಧ್ಯಕ್ಷರಾದ ಶುಭ ಧನಂಜಯ,ಬಿಎಸ್ ಎನ್ ಎಲ್ ಕೋಆಪರೇಟಿವ್ ಸೊಸೈಟಿಯ ಡಾ.ಜಿ.ಬಾಬು, ಬಸವಕುಮಾರ್ ಸ್ವಾಮೀಜಿ, ಆರ್.ವೆಂಕಟಚಲಪತಿ,ಸಹಕಾರ ಇಲಾಖೆಯ ಲಕ್ಷ್ಮೀ ಪತ್ತಯ್ಯ, ಗೋವಿಂದ ಬಾಬು ಪೂಜಾರಿ, ಟಿ.ಜಗದೀಶ್, ಡಾ.ನಕ್ಷತ್ರ, ಡಾ.ಕೆ.ಸೆಲ್ವಿರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾ.ಬನ್ನೂರಮಠ, ಆಕಾಡೆಮಿ ಅಧ್ಯಕ್ಷರಾದ ಮು.ಗೋವಿಂದರಾಜು, ವಕೀಲೆ ಡಾ,ಸತ್ಯಶ್ರೀ ಮತ್ತಿತರರು ಭಾಗವಹಿಸಿದ್ದರು.