ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ ಇಲ್ಲಿ ನಡೆದ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ನ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ನೂತನ ವರ್ಷವನ್ನು ಗೆಲುವಿನೊಂದಿಗೆ ಸ್ವಾಗತಿಸಿದ ಅವರು, ಭಾರತದ ಚೆಸ್ ವಲಯಕ್ಕೆ ಹೊಸ ಉತ್ಸಾಹ ತುಂಬಿದ್ದಾರೆ. ಸ್ಟಾರ್ ಆಟಗಾರ್ತಿ ಕೊನೆರೆ ಹಂಪಿ ರಾಪಿಡ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಂತರ ಭಾರತಕ್ಕೆ ಒಲಿದ ಪ್ರಶಸ್ತಿ ಇದಾಗಿದೆ.
ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ಅವರ ಸಹೋದರಿ ಆಗಿರುವ ವೈಶಾಲಿ 0.5 -2.5 ಅಂಕಗಳಿಂದ ಚೀನಾದ ಜು ವೆಂಜುನ್ ವಿರುದ್ಧ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ಭಾರತೀಯ ಆಟಗಾರ್ತಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 2.5-1.5 ಅಂಕಗಳ ಅಂತರದಿಂದ ಚೀನಾದ ಝು ಜಿನೆರ್ ಎದುರು ಗೆದ್ದು ಉಪಾಂತ್ಯ ತಲುಪಿದ್ದರು. ಚೀನಾ ಆಟಗಾರ್ತಿಯರು ಟೂರ್ನಿಯಲ್ಲಿಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಜು ವೆಂಜುನ್ ಫೈನಲ್ ಪಂದ್ಯದಲ್ಲಿ 3.5-2.5 ಅಂಕಗಳಿಂದ ಸಹ ಸ್ಪರ್ಧಿ ಲೀ ಟೆಂಗ್ಜಿ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.
ವಿಶ್ವನಾಥನ್ ಆನಂದ್ ಪ್ರಶಂಸೆಐದು ಬಾರಿಯ ವಿಶ್ವ ಚಾಂಪಿಯನ್ ಮತ್ತು ಅಂತಾರಾಷ್ಟ್ರೀಯ ಚೆಸ್ ಒಕ್ಕೂಟದ(ಫಿಡೆ) ಉಪಾಧ್ಯಕ್ಷ ವಿಶ್ವನಾಥನ್ ಆನಂದ್, ವೈಶಾಲಿ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ”ವರ್ಷವನ್ನು ಕೊನೆಗೊಳಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ,” ಎಂದು ಅವರು ಹೇಳಿದರು. ”ಕಂಚಿನ ಪದಕ ಗೆದ್ದ ವೈಶಾಲಿಗೆ ಅಭಿನಂದನೆಗಳು. ವೈಶಾಲಿಯ ಹೋರಾಟ ನಿಜವಾಗಿಯೂ ಶಕ್ತಿ ತುಂಬಿದ ಪ್ರದರ್ಶನವಾಗಿತ್ತು. ವಾಕಾದ ಚೆಸ್ ಆಕಾಡೆಮಿಯ ಆಟಗಾರ್ತಿಯ ಸಾಧನೆಯು ನಮಗೆ ಹೆಮ್ಮೆ ತಂದಿದೆ,” ಎಂದು ಎಕ್ಸ್ ಖಾತೆಯಲ್ಲಿ ಆನಂದ್ ಹೇಳಿದ್ದಾರೆ.
ಕಾಲ್ರ್ಸನ್, ಇಯಾನ್ ಜಂಟಿ ವಿಜೇತರುಮುಕ್ತ ವಿಭಾಗದಲ್ಲಿವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾಲ್ರ್ಸನ್ ಮತ್ತು ರಷ್ಯಾದ ಇಯಾನ್ ನೆಪೊಮ್ನಿಯಾಷಿ ಜಂಟಿಯಾಗಿ ಬ್ಲಿಟ್ಜ್ ಕಿರೀಟವನ್ನು ಹಂಚಿಕೊಂಡರು. ಮೂರು ಸಡನ್ ಡೆತ್ ಗೇಮ್ಗಳ ಸಹ ಡ್ರಾನಲ್ಲಿಕೊನೆಗೊಂಡ ಕಾರಣ ಇಯಾನ್ ಮತ್ತು ಕಾಲ್ರ್ಸನ್ ಜಂಟಿ ವಿಜೇತರಾಗಿ ಹೊರಹೊಮ್ಮಿದರು. ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಫೈನಲ್ನ ಇಬ್ಬರು ಸ್ಪರ್ಧಿಗಳು ಪ್ರಶಸ್ತಿಯನ್ನು ಹಂಚಿಕೊಂಡರು. ಕಾಲ್ರ್ಸನ್ ಅಂಕ ಹಂಚಿಕೊಳ್ಳಲು ನಿರ್ಧರಿಸಿದ ಕಾರಣ ಜಂಟಿ ವಿಜೇತರನ್ನು ಘೋಷಿಸಲಾಯಿತು.