ಬೆಂಗಳೂರು: ಇನ್ಮುಂದೆ ಒಳ್ಳೆಯ ಕಾಲ ಬರಲ್ಲ.ನಾನು ಕೂಡ ಒಳ್ಳೆಯ ಕಾಲದ ಅಂತ್ಯದಲ್ಲಿದ್ದೇನೆ. ನಿಮಗಾಗಲೀ, ನನಗಾಗಲೀ ಒಳ್ಳೆಯ ಕಾಲ ಬರುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.ವಿಧಾನಪರಿಷತ್ನಲ್ಲಿ ಅಧಿವೇಶನ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಲಕ್ಷ್ಮೀಹೆಬ್ಬಾಳ್ಕರ್-ಸಿ.ಟಿ.ರವಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಡುಗರಿಗೆ ಹೆಚ್ಚು ಕ್ಲಾಸ್ ತೆಗೆದುಕೊಂಡ್ರೂ ಪ್ರಯೋಜನ ಆಗಲ್ಲ ಎಂದಿದ್ದಾರೆ.
ಯಾವುದೋ ಘಟನೆಗೆ ಕೌನ್ಸಿಲ್ ನಡೆಯದ ಹಾಗೇ ನೋಡಿಕೊಳ್ಳುತ್ತೇವೆ ಎಂದಿರುವ ಅವರು, ಘಟನೆ ಮುಗಿದ ಅಧ್ಯಾಯ. ಅಂದು ಎರಡ್ಮೂರು ಘಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಆದಾದ ಬಳಿಕ ನಾನು ರೂಲಿಂಗ್ ಕೊಟ್ಟಿದ್ದೇನೆ. ಹೊರಗೆ ಆದ ಗದ್ದಲಕ್ಕೆ ನಾವು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊರಗೆ ಆದ ಗಲಾಟೆಗೂ ನಮ್ಮ ಸದನಕ್ಕೂ ಏನೇನೂ ಸಂಬಂಧವಿಲ್ಲ. ಹೊರಗಡೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ಅದಕ್ಕೆ ಆರೆಸ್ಟ್ ಮಾಡುವುದು, ಇನ್ನೊಂದು ಮತ್ತೊಂದು ಆಗಿದೆ. ಒಂದೇ ಒಂದು ವಿಚಾರ ಇಲ್ಲಿ ನಡೆದಿದೆ. ವಿಧಾನಪರಿಷತ್ನಲ್ಲಿ ಆಗಿದೆ ಅಂದಿದ್ದಾರೆ. ಅದು ತಪ್ಪು. ಸದನದೊಳಗೆ ನಡೆದ ಪ್ರಕ್ರಿಯೆಗೆಪೊಲೀಸರು ಹಸ್ತಕ್ಷೇಪ ಮಾಡಬಾರದು. ಅವರು ಮಾಡಿದ್ದೇ ಆದ್ರೆ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಈ ಘಟನೆ ಮಧ್ಯಾಹ್ನ 1 ಘಂಟೆಗೆ ಆಗಿದೆ ಎಂದಿದ್ದಾರೆ.
ವಿಧಾನಪರಿಷತ್ ಒಳಗೆ ಆದ ಘಟನೆಯ ಮೇಲೆ ಎಫ್ಐಆರ್ ಹಾಕಿದ್ದಾರೆ. ಹಾಗೇ ಹಾಕಿರುವ ಕಾರಣ. ಅವರ ವಿರುದ್ಧ ಕ್ರಮ ಆಗುತ್ತದೆ. ಒಂದು ವೇಳೆ ಘಟನೆ ಆಗಿದೆ ಎನ್ನುವುದಾದ್ರೆ ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ. ಸದನ ನಡೆಯುವಾಗ ಆದ ಮಾತಿಗೆ ಮಾತ್ರ ಮನ್ನಣೆ. ಈಗ ಸಭಾಪತಿಯಾಗಿ ಕ್ರಮ ಏನು ಆಗಬೇಕು ಎಂಬುದನ್ನು ಚರ್ಚೆ ಮಾಡುತ್ತೇನೆ. ನಾನು ಅಂದು ರಾತ್ರಿ 1 ಘಂಟೆಯವರೆಗೂ ಸಿ.ಟಿ.ರವಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಮೂರು ಬಾರಿ ಪೋನ್ನಲ್ಲಿ ಸಂಪರ್ಕ ಮಾಡಿದ್ದೇನೆ.
ನಾನು ಕಮಿಷನರ್ ಹಾಗೂ ಎಸ್ಪಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಅಂದು ಎಸ್ಪಿ ಹಾಗೂ ಕಮಿಷನರ್ಗೆ ತಿಳಿಸಿದ್ದೇ. ಸಿ.ಟಿ.ರವಿ ಅವರಿಗೆ ಏನೇ ಆದ್ರೂ ನೀವೇ ಕಾರಣ ಎಂದು ತಿಳಿಸಿದ್ದೇ. ನಾನು ತಿಳಿಸಿದ್ದೇ ಎಂಬ ಕಾರಣಕ್ಕೆ ಅಂಕಲಗಿ ಠಾಣೆಗೆ ಅವರನ್ನು ಕರೆದುಕೊಂಡು ಬಂದಿದ್ದಾರೆ.ಯಾವ ಪಕ್ಷದವರೂ ಆದ್ರೂ ಸರಿ. ಅವರ ಜವಾಬ್ದಾರಿ ನನ್ನದು. ಹೀಗಾಗಿ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಫೇಕ್ ಎನ್ಕೌಂಟರ್ ಬಗ್ಗೆ ನಾನು ಹೇಳುವುದಿಲ್ಲ. ಅದು ಅವರ ಹೇಳಿಕೆ. ನಾನು ಇದಕ್ಕೆ ಉತ್ತರ ಕೊಡುವುದಿಲ್ಲ. ಸಮಿತಿ ರಚನೆ ಬಗ್ಗೆ ಚರ್ಚೆಯಾಗುತ್ತಿರುವ ವಿಚಾರ. ಎಥಿಕ್ ಕಮಿಟಿಗೆ ಕೊಡುವ ಅವಶ್ಯಕತೆ ಬರುವುದಿಲ್ಲ. ನಾನು ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಇದರ ಅವಶ್ಯಕತೆ ಬರುವುದಿಲ್ಲ.
ಕೆಳಗಿನ ಮನೆಯ ಬಗ್ಗೆ ನಾನು ಮಾತನ್ನಾಡುವುದಿಲ್ಲ. ಈಗ ಹಕ್ಕುಚ್ಯುತಿ ಬಗ್ಗೆ ಪತ್ರ ಬಂದಿದೆ. ಅದರ ಬಗ್ಗೆ ಏನು ಕ್ರಮ ಆಗಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ದೂರು ಬಂದರೆ ಉತ್ತರ ಕೊಡುತ್ತೇನೆ.
ಅವರು ನನ್ನ ಪ್ರಶ್ನೆ ಮಾಡಲು ಬರಲು ಬರುವುದಿಲ್ಲ. ಪೊಲೀಸರು ನನಗೆ ರಾತ್ರಿ 9 ಘಂಟೆಗೆ ಮಾಹಿತಿ ಕೊಟ್ಟಿದ್ದಾರೆ. ಆರೆಸ್ಟ್ ಮಾಡುವಾಗ ನನಗೆ ಮಾಹಿತಿ ಬಂದಿದೆ. ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.ವಿಧಾನಪರಿಷತ್ ಮೊಗಸಾಲೆಯಲ್ಲಿ ಆಟ್ಯಾಕ್ ಮಾಡುತ್ತಾರೆ ಅಂದರೆ ಸರಿಯಲ್ಲ. ಹೀಗಾಗಿ ನಾವು ಆತನನ್ನು ಬಂಧಿಸಲು ಸೂಚಿಸಿದ್ದೇನೆ ಎಂದು ಹೇಳಿದರು.