ಬೆಂಗಳೂರು: ನರ್ಸಿಂಗ್ ಹಾಸ್ಟೆಲ್ ವಿದ್ಯಾರ್ಥಿಗಳು ಹಾಸ್ಟೆಲನ ನೆಲ್ಲ ಮಹಡಿಯಲ್ಲಿ ಇಲಿ ಪಾಷಾಣ ಸಿಂಪಡಿಸಿದ್ದರಿಂದ ಉಸಿರಾಟದ ತೊಂದರೆ ತೀವ್ರವಾಗಿ ಪರಿಣಾಮ ಬೀರಿದ್ದರಿಂದ 19 ಜನ ನರ್ಸಿಂಗ್ ವಿದ್ಯಾರ್ಥಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ತಿಳಿಸಿರುತ್ತಾರೆ.
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮ ಆಶ್ರಮದ ಬಳಿ ಇರುವ ಆದರ್ಶ ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿರುತ್ತದೆ.ಮಂಜೇಗೌಡ ಎಂಬ ನರ್ಸಿಂಗ್ ಕಾಲೇಜಿನ ಕೆಲಸಗಾರ ನರ್ಸಿಂಗ್ ಕಾಲೇಜಿನಲ್ಲಿ ಮತ್ತು ಜನರೇಟರ್ ಗಳಲ್ಲಿ ಇಲಿಗಳ ಹಾವಳಿ ವಿಪರೀತವಾದ್ದರಿಂದ ಇಲಿಗಳನ್ನು ಕೊಲ್ಲುವುದಕ್ಕಾಗಿ ವಿಷ ಸಿಂಪಡಿಸಿ ಹೋಗಿದ್ದನು ಎಂದು ಡಿಸಿಪಿ ರವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ತೀವ್ರವಾದರಿಂದ ಸೃಷ್ಟಿಯಾಗಿದ್ದರಿಂದ ತೀವ್ರವಾಗಿ ಅಸ್ವಸ್ಥರಾಗಿದ್ದರೂ 16 ಜನಕ್ಕೆ ಚಿಕಿತ್ಸೆ ನೀಡಿ ಕಳುಹಿಸಿ ಮತ್ತು ಜಯನ್ ವರ್ಗಿಸ್, ದಿಲೀಶ್ ಮತ್ತು ಜೋಮಾನ್ ಎಂಬುವರನ್ನು ಐಸಿಯುನಲ್ಲಿ ದಾಖಲು ಮಾಡಲಾಗಿರುತ್ತದೆ ಎಂದು ತಿಳಿಸಿದರು.ಕಾಲೇಜಿನ ನೋಯಲ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಜೇಗೌಡ ಮತ್ತು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.