ಮಕ್ಕಳು
“ಇಳೆಗೆ ಬೆಳಗು ಮಕ್ಕಳು
ಮುಂದಿನ ಪೀಳಿಗೆಯ ಒಕ್ಕಲು”
“ಮನೆಗೆ ಮಂದಾರ ಮಕ್ಕಳು
ಬಂಧನ ಬಾಂಧವ್ಯದ ಹೊನಲು”
“ಪಾವಿತ್ರ÷್ಯತೆಯ ಪರಮೋಚ್ಚ ಸ್ಥಾನ..
ತಾಯ ಗರ್ಭದಡಿಯಲ್ಲಿ
ಮೊಳಕೆಯೊಂದು ಜೀವಾತ್ಮವಾಗುವ
ಅಚ್ಚರಿ ಮಕ್ಕಳು”
“ಪೋಷಕರ ಕಣ್ಣುಗಳಲ್ಲಿ ಕನಸುಗಳು ಕವಲೊಡೆದು
ಜನನವಾದ ಕ್ಷಣದಿಂದ
ಅಪ್ಪ-ಅಮ್ಮನೆಂಬ ಸ್ಥಾನಕ್ಕೇರುವ ಭಾಗ್ಯ
ತಂದವರು ಮಕ್ಕಳು”
“ವಂಶದ ವಾರಸುಧಾರಿಕೆಯ
ರೂವಾರಿಗಳಾಗಿ ರೂಪುಗೊಳ್ಳುವ ದಿವ್ಯಪ್ರಭೆ ಮಕ್ಕಳು”
“ಮಕ್ಕಳು ಮಕ್ಕಳಾಗಿರುವಾಗ ಚಂದ.
ಅವರಿಗೆ ಮಕ್ಕಳಾಗುವ ಕಾಲ ಬಂದಾಗ ಆನಂದ”
“ತAದೆ ತಾಯಿಯನ್ನು ಮಕ್ಕಳಂತೆ ನೋಡಿಕೊಳ್ಳುವ ಜವಾಬ್ದಾರಿ
ಹೊರಬೇಕು ಅದು ಪರಮಾನಂದ.”
“ತAದೆ-ತಾಯಿಗೆ ಆನಂದ ನೀಡಿ
ಅನಾಥಾಶ್ರಮದ ದಾರಿ ತೋರಬೇಡಿ.. ಮಕ್ಕಳೇ”
– ಡಾ. ಗುಣವಂತ ಮಂಜು.
ಸಾಹಿತಿ, ಚಲನಚಿತ್ರ ನಿರ್ದೇಶಕರು