ತಿ.ನರಸೀಪುರ: ಉಕ್ಕಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಪರಮೇಶ್ವರ ಹಾಗೂ ಉಪಾಧ್ಯಕ್ಷರಾಗಿ ಜಯಂತಿ ಸಿದ್ದರಾಮು ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ಉಕ್ಕಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಸಲಾಯಿತು.
11 ನಿರ್ದೇಶಕರ ಸಂಖ್ಯಾ ಬಲ ಹೊಂದಿರುವ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಂತಿ ಸಿದ್ದರಾಮು ರವರ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿ ಸಿಡಿಓ ಹಸೀನಾ ಅಧ್ಯಕ್ಷರಾಗಿ ಪರಮೇಶ್ವರ ಮತ್ತು ಉಪಾಧ್ಯಕ್ಷರಾಗಿ ಜಯಂತಿ ಸಿದ್ದರಾಮು ಅವಿರೋಧವಾಗಿ ಆಯ್ಕೆಯಾದರೆಂದು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪರಮೇಶ್ವರ ಹಾಲು ಉತ್ಪಾದನೆಯ ಗುಣಮಟ್ಟ ಸುಧಾರಣೆಗೆ ಉತ್ತೇಜನ ನೀಡುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ನಿರ್ದೇಶಕರ ಸಹಕಾರ ದೊಂದಿಗೆ ಕೆಲಸ ಮಾಡುತ್ತೇನೆ ಎಂದರು.
ಉಪಾಧ್ಯಕ್ಷೆ ಜಯಂತಿ ಸಿದ್ದರಾಮು ಮಾತನಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಮತ್ತು ರೈತರಿಗೆ ಅಭಿನಂದನೆಗಳು ಎಂದು ಹೇಳಿದರು.ಕಾಂಗ್ರೆಸ್ ಡಿ.ಸಿ.ಸಿ.ಸದಸ್ಯ ಬಸವಣ್ಣ ನೂತನ ಅಧ್ಯಕ್ಷ, ಉಪಾಧ್ಯಕರು ಹಾಗೂ ನಿರ್ದೇಶಕರಿ ಅಭಿನಂದನೆ ಸಲ್ಲಿಸಿದರು ಹಾಗೂ ಎಲ್ಲರೂ ಒಗ್ಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದರಲ್ಲದೆ ಸಂಘದ ಕಟ್ಟಡ ನಿರ್ಮಾಣಕ್ಕೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನಿಲ್ ರವರಿಂದ ಅನುದಾನ ಕೂಡಿಸುವ ಭರವಸೆ ನೀಡಿದರು.
ಚುನಾವಣೆ ಸಭೆಯಲ್ಲಿ ನಿರ್ದೇಶಕರಾದ ನಾಗರಾಜು, ನಾಗೇಶ್, ಶಿವಸ್ವಾಮಿ, ಮಹದೇವ ಸ್ವಾಮಿ, ಶಿವಸ್ವಾಮಿ, ಜಯಮ್ಮ, ಉಷಾ, ಜೆ.ಮಹದೇವಪ, ನಾಗೇಂದ್ರ ಕಾರ್ಯದರ್ಶಿ ಮಣಿಕಂಠ, ಮುಖಂಡರುಗಳಾದ ಕಾಂಗ್ರೆಸ್ ಮುಖಂಡ ಉಕ್ಕಲಗೆರೆಬಸವಣ್ಣ, ಮಂಜುನಾಥ್, ರವಿಶಂಕರ್, ನಾಗೇಂದ್ರ, ಪಾಪಣಿ ನಾಗರಾಜು, ರವಿ, ಮಹದೇಸ್ವಾಮಿ, ಮನು, ನಿಂಗರಾಜು ಸಿದ್ದರಾಮು, ಪ್ರಭುಸ್ವಾಮಿ ಡೈರಿ ಮಹದೇವಸ್ವಾಮಿ, ಮಲ್ಲೇಶ, ಮಹದೇವಪ್ಪ, ನಾಗೇಂದ್ರ ಮಹದೇವಶೆಟ್ಟಿ, ಮಾಧು, ರುದ್ರ ಮಹದೇವಸ್ವಾಮಿ, ಯು. ಬಿ. ಎಂ.ಮಹದೇವಪ್ಪ, ಮಲ್ಲಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.