ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿರುವಂತೆಯೇ ಕೊನೆಗೂ ಮೌನ ಮುರಿದಿರುವ ಸಿಎಂ ಒಮರ್ ಅಬ್ದುಲ್ಲಾ, ‘ನಾಗರಿಕರ ಮೇಲಿನ ದಾಳಿಗೆ ಯಾವುದೇ ಸರ್ಥನೆ ಬೇಕಿಲ್ಲ.. ಸಾಧ್ಯವಾದಷ್ಟೂ ಬೇಗ ಉಗ್ರರ ಆಟಾಟೋಪ ಕೊನೆಗೊಳಿಸಿ ಎಂದು ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಮಿಕರ ಮೇಲೆ ದಾಳಿ ಮಾಡಿದ್ದ ಕಮಾಂಡ್ ಸೇರಿ ಮೂವರು ಉಗ್ರರರನ್ನು ಭಾರತೀಯ ಸೇನಾ ಸಿಬ್ಬಂದಿ ಹೊಡೆದುರಳಿಸಿದ್ದರು. ಇದರ ಮಾರನೇ ದಿನವೇ ಉಗ್ರರು ಶ್ರೀನಗರದ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಕನಿಷ್ಠ ೧೨ ಮಂದಿ ಗಾಯಗೊಂಡಿದ್ದು, ಈ ದಾಳಿ ಬೆನ್ನಲ್ಲೇ ಉಗ್ರರ ವಿಚಾರವಾಗಿ ಒಮರ್ ಅಬ್ದುಲ್ಲಾ ರ್ಕಾರ ಮೃದು ಧೋರಣೆ ತಳೆಯುತ್ತಿದ್ದು, ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಉಗ್ರರ ಆಟಾಟೋಪ ಹೆಚ್ಚಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಈ ಟೀಕೆಗಳ ಬೆನ್ನಲ್ಲೇ ಇದೀಗ ಕೊನೆಗೂ ಮೌನ ಮುರಿದಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಉಗ್ರರ ಆಟಾಟೋಪ ಅಂತ್ಯಗೊಳಿಸುವಂತೆ ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.