ಹನೂರು: ಹೊಸ ವರ್ಷದ ಹೊಸ್ತಿಲಿನಲ್ಲಿ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಉಚಿತ ವಿಶೇಷ ತರಬೇತಿ ತರಗತಿಗಳನ್ನು ನಡೆಸಲು ಪೂಜ್ಯರಾದ ವೀರೇಂದ್ರ ಹೆಗ್ಡೆ ಹಾಗೂ ಹೇಮಾವತಿ ಹೆಗ್ಡೆಯವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ಹನೂರು ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಉಚಿತ ವಿಶೇಷ ತರಬೇತಿ ತರಗತಿ ಪ್ರಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 3 ತಿಂಗಳುಗಳ ಕಾಲ ಉಚಿತ ತರಬೇತಿಯನ್ನು ನಡೆಸುವ ದೆಸೆಯಲ್ಲಿ ರಾಜ್ಯದ 1000 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಹನೂರು ತಾಲ್ಲೂಕಿನಲ್ಲಿ 5 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಅನುಕೂಲವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ನಾಗರಾಜು ಮಾತನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಅನುಕೂಲಕ್ಕೆ ಉಚಿತ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತಿರುವ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ಕಾರ್ಯವೈಖರಿ ಮೆಚ್ಚುವಂತದದ್ದು. ಧರ್ಮಸ್ಥಳ ಮಂಜುನಾಥ್ ಸ್ವಾಮಿ ಎಂದರೆ ಆರಾಧ್ಯ ಭಾವನೆ. ನನ್ನ ವೃತ್ತಿ ಜೀವನ ಪ್ರಾರಂಭವಾದದ್ದು ಮಂಜುನಾಥ್ ಸ್ವಾಮಿಯ ಧರ್ಮಸ್ಥಳ ಭಾಗದಿಂದ ನನ್ನ ವೃತ್ತಿ ಜೀವನ ಮುಗಿಯುವ ದಿನಮಾನಗಳಲ್ಲಿ ಧರ್ಮಸ್ಥಳ ಸಂಘದವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕೂಡ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಸೇವಾ ಮನೋಭಾವಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಂಡಳ್ಳಿ ವಲಯದ ಮೇಲ್ವಿಚಾರಕರು ಸುರೇಶ್. ಎನ್. ಕೆ. ಸರ್ಕಾರಿ ಪ್ರೌಢಶಾಲೆ ಮಣ ಗಳ್ಳಿ ಮುಖ್ಯ ಶಿಕ್ಷಕರಾದ ನಾಗರಾಜು. ಶಿಕ್ಷಕರಾದ ಜೈ ಶಂಕರ್. ಶಿವಶಂಕರ್.ಮಹೇಶ್ ಮುಖಂಡರಾದ ಬಸವಣ್ಣ ಶಿವಣ್ಣ ಮಹೇಶ್ ಸೇವಾ ಪ್ರತಿನಿಧಿ ಮಮತಾ ವಿದ್ಯಾರ್ಥಿಗಳು ಹಾಜರಿದ್ದರು.