ಬೊಮ್ಮನಹಳ್ಳಿ: ಉತ್ತರ ಕರ್ನಾಟಕ ಮಂದಿಯ ಮಾತು ಖಡಕ್ ರೊಟ್ಟಿ ಖಾರ ಆದರೆ ಮನಸ್ಸು ಮಾತ್ರ ಬೆಣ್ಣೆ, ಗಟ್ಟಿಮೊಸರು ರೀತಿಯಲ್ಲಿ ಇರುತ್ತದೆ ಎಂಬುದಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕ ವ್ಯವಸ್ಥಾಪಕ ಮಹಾಂತೇಶ ಕಿವಡಸಣ್ಣ ತಿಳಿಸಿದರು.ಅವರು ಮೈಕೊ ಉತ್ತರಕರ್ನಾಟಕ ಗೆಳೆಯರ ಬಳಗದ ವತಿಯಿಂದ ಬಿಟಿಎಂ ಲೇಔಟ್ ನ ಶ್ರೀ ತೋಂಟದ ಸಿದ್ದಲಿಂಗೇಶ್ವರ ಸಮುದಾಯ ಭವನದಲ್ಲಿ ಹಮ್ನಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಸೀಮೆ ಮತ್ತು ಜನರು ಇಡೀ ಕರ್ನಾಟಕದ ರಾಜ್ಯದಲ್ಲಿಯೇ ವಿಶಿಷ್ಠವಾದ ಹಾಗೂ ವಿಶೇಷವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದಾರೆ ಇವರ ನಡೆ.ನುಡಿ.ಆಚಾರ,ವಿಚಾರ ಹಾಗೂ ಅಹಾರ ಬಹಳ ಆಕರ್ಷಣೆಯಿಂದ ಕೂಡಿರುತ್ತದೆ ಇಂತಹ ಜಾನಪದ ಸೊಗಡಿನ ಸಂಸ್ಕೃತಿಯನ್ನು ನಗರದ ಜನರಿಗೆ ಪರಿಚಯಿಸುವಂತಹ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮೈಕೊ ಉತ್ತರ ಕರ್ನಾಟಕ ಗೆಳೆಯರ ಬಳಗದ ಅಧ್ಯಕ್ಷರಾದ ಶಿವಾನಂದ ಲೋಖಂಡೆ ಮಾತನಾಡುತ್ತ ನಮ್ಮ ಭಾಗದ ಉಡುಗೆ ತೊಡುಗೆ, ಸಂಸ್ಕೃತಿ, ಸಂಸ್ಕಾರ ಹಾಗೂ ಆಹಾರ ಪದ್ಧತಿಗಳು ಇಂದಿನ ಜಾಗತೀಕರಣದ ಯುಗದಲ್ಲಿ ನಶಿಸಿ ಹೋಗದಂತೆ ಯುವ ಜನಾಂಗಕ್ಕೆ ಮುಂದುವರಿಸಿಕೊಂಡು ಹೋಗಬೇಕು ಹಾಗೂ ನಗರದ ಜನರಿಗೆ ಅದನ್ನು ಪರಿಚಯಿಸಬೇಕು ಎಂಬುದು ಈ ಬಳಗದ ಮುಖ್ಯ ಉದ್ದೇಶವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ಮೈಕೊ ಉತ್ತರಕರ್ನಾಟಕ ಗೆಳೆಯರ ಬಳಗದ ಕಾರ್ಯದರ್ಶಿ ಭರತ್ ಪಾಟೀಲ ಹಾಜರಿದ್ದರು.
ಇದೇ ಸಂದರ್ಭದಲ್ಲಿ ವೀರ ಯೋಧರಿಗಾಗಿ ರಕ್ತದಾನ ಶಿಬಿರ, ವಿಕಲಾಂಗ ಮಕ್ಕಳಿಗೆ ಕ್ರೀಡಾಕೂಟ ಹಾಗೂ ಬಳಗದ ಸದಸ್ಯರಿಗೆ ನಾಟಕ, ಸಮಾಜದ ಗಣ್ಯವ್ಯಕ್ತಿಗಳನ್ನು, ಸಾಹಿತಿಗಳನ್ನು, ರಂಗ ಭೂಮಿಯ ಕಲಾವಿದರನ್ನು ಹಾಗೂ ಸಮಾಜದ ಹಿತಚಿಂತಕರಿಗೆ ಸನ್ಮಾನ , ನಿವೃತ್ತ ಸದಸ್ಯರಿಗೆ ಸನ್ಮಾನ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರ ಮಕ್ಕಳು ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉತ್ತರಕರ್ನಾಟಕದ ಆಹಾರಗಳಾದ ಗೋಧಿ ಹುಗ್ಗಿ, ಶೇಂಗಾ ಹೋಳಗಿ, ಬಿಸಿ ರೋಟ್ಟಿ, ಕಟಕ ರೋಟ್ಟಿ, ಸಜ್ಜಿ ರೋಟ್ಟಿ, ಬದನೆಕಾಯಿ ಪಲ್ಯ, ಪುಂಡಿ ಪಲ್ಯ, ಕಾಳು ಪಲ್ಯ ಅನ್ನ, ಸಾರು, ಶೇಂಗಾ, ಚಟ್ಟಿ, ಮೊಸರು, ಕೆಂಪ ಚಟ್ಟಿ, ಹುರಿದ ಹಸಿ ಮೇಣಸಿನಕಾಯಿ, ಉಪ್ಪಿನಕಾಯಿ, ಮಜ್ಜಗಿ, ಸೌತೆಕಾಯಿ, ಗಜ್ಜರಿ, ಮೂಲಂಗಿ, ಮೆಂತೆ ಸೊಪ್ಪು, ಉಳ್ಳಾಗಡ್ಡಿ ಸೊಪ್ಪು ಇತ್ಯಾದಿಗಳನ್ನು ಸುಮಾರ 1000 ಜನರು ಭಾಗವಹಿಸಿದ್ದರು.