ದೊಡ್ಡಬಳ್ಳಾಪುರ: ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಒದಗಿದೆ. ಕನ್ನಡಕ್ಕೆ ಆದ್ಯತೆ ನೀಡುವುದರೊಂದಿಗೆ ಭಾಷೆಯ ಹಬಳಕೆಯ ಅನಿವಾರ್ಯತೆ ಸೃಷ್ಟಿಯಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಜಯರಾಂ ಹೇಳಿದರು.
ನಗರದ ಗಂಗಾಧರಪುರದ ಶ್ರೀರಾಜರಾಜೇಶ್ವರಿ ಕನ್ನಡ ಯುವಕ ಸಂಘದ 26ನೇ ವಾರ್ಷಿಕೋತ್ಸವ, 69ನೇ ಕನ್ನಡ ಪಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಉದ್ಯೋಗಗಳು ಉತ್ತರ ಭಾರತದವರ ಪಾಲಾಗುತ್ತಿವೆ. ಕನ್ನಡ ಭಾಷೆಗೆ ಆತಂಕ ಒದಗುವುದ- ದೊಂದಿಗೆ ಕನ್ನಡಿಗರಿಗೂ ಆತಂಕ ಒದಗಿ ಬಂದಿದೆ. ಈ ದಿಸೆಯಲ್ಲಿ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ರವಿಕುಮಾರ್, ಕರ್ನಾಟಕದ ಪರಂಪರೆ ಹಾಗೂ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಕನ್ನಡ ಭಾಷೆಯ ಬಳಕೆ ಹೆಚ್ಚಾದಷ್ಟು ಭಾಷೆಯ ಅಸ್ತಿತ್ವ ಹೆಚ್ಚಾಗುತ್ತದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕಿದೆ ಎಂದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಇಡೀ ದೇಶದಲ್ಲಿ ಉದ್ಯೋಗ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯ ಕರ್ನಾಟಕ ಎನ್ನುವುದು ಹೆಮ್ಮೆಯ ವಿಚಾರ. ದರೆ ಕನ್ನಡಿಗರ ಹೆಚ್ಚಿನ ಔದಾರ್ಯ ಆದರೆ ತೋರುತ್ತಿರುವುದೇ ಇತರೆ ರಾಜ್ಯದ ಜನರು ಇಲ್ಲಿನ ಸೌಲಭ್ಯಗಳನ್ನು ಬಳಸಿ- ಕೊಳ್ಳುವಂತಾಗಿದೆ ಎಂದರು.
ಇಂದು ರೈಲ್ವೆಯಲ್ಲಿ ಉದ್ಯೋಗಗಳಿದ್ದರೂ ಕನ್ನಡಿಗರುಅರ್ಜಿ ಹಾಕುತ್ತಿಲ್ಲ ಎಂದು ರೈಲ್ವೆ ಸಚಿವರು ಇತ್ತೀಚೆಗೆ ಹೇಳಿರುವುದು ಬೇಸರದ ಸಂಗತಿ. ಜಾಗತೀಕರಣದ ಇಂದಿನ ದಿನಗಳಲ್ಲಿ ಭಾಷೆಯನ್ನು ಉಳಿಸಿಕೊಳ್ಳುವುದರೊಂ- ದಿಗೆ, ಸಿಗುವ ಅವಕಾಶ ಬಳಸಿಕೊಳ್ಳ. ದಿದ್ದರೆ ನೆಲ, ಜಲ, ಉದ್ಯೋಗ ಎಲ್ಲಾ ಸವಲತ್ತುಗಳು ಪರರ ಪಾಲಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶ್ರೀರಾಜ ರಾಜೇಶ್ವರಿ ಕನ್ನಡದ ಯುವಕರ ಸಂಘದ ಅಧ್ಯಕ್ಷ ಆರ್.ಕೆಂಪರಾಜು, ನಿವೃತ್ತ ಶಿಕ್ಷಕ ವೆಂಕಟೇಶ್ ರೆಡ್ಡಿ, ರಾಜರಾಜೇಶ್ವರಿ ಕನ್ನಡ ಯುವಕ ಸಂಘದ ಗೌರವಾಧ್ಯಕ್ಷ ಎನ್.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಸತೀಶ್, ಖಜಾಂಚಿ ಆರ್.ಶ್ರೀನಿವಾಸಮೂರ್ತಿ, ಸಂಚಾಲಕ ಚಂದ್ರು, ಕಸಾಪ ತಾಲೂಕು ಖಜಾಂಚಿ ಸಾ.ಲ.ಕಮಲಾನಾಥ್, ಜಯರಾಂ. ನಂದಕುಮಾರ್, ಮುನಿರಾಜು ಇದ್ದರು.